ಡೆಹ್ರಾಡೂನ್: ಉತ್ತರಾಖಂಡ್ ಬಿಜೆಪಿ ಶಾಸಕ ಮಹೇಶ್ ನೇಗಿ ಅತ್ಯಾಚಾರವೆಸಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ.
ಸ್ಥಳೀಯ ನ್ಯಾಯಾಲಯದ ಆದೇಶದಂತೆ ಶಾಸಕ ಮಹೇಶ್ ನೇಗಿ ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ಪ್ರಕರಣ ದಾಖಲಾಗಿದೆ. ನೇಗಿ ಅವರ ಪತ್ನಿ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಶಾಸಕ ಮಹೇಶ್ ನೇಗಿ ಅತ್ಯಾಚಾರ ಎಸಗಿದ್ದು, ನನ್ನ ಮಗಳಿಗೆ ತಂದೆಯಾಗಿರುವುದಾಗಿ ಆಗಸ್ಟ್ 16 ರಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಆರೋಪ ಖಚಿತಪಡಿಸಿಕೊಳ್ಳಲು ಡಿಎನ್ಎ ಪರೀಕ್ಷೆಗೆ ಒತ್ತಾಯಿಸಿದ್ದಾರೆ.
ದೂರು ನೀಡಿದ ಮಹಿಳೆಯ ನಡತೆ ಸರಿಯಿಲ್ಲ ಎಂದು ಮಹೇಶ್ ನೇಗಿ ಆರೋಪ ಮಾಡಿದ್ದರು. ಮಹಿಳೆ ನೀಡಿದ ದೂರು ಆಧರಿಸಿ ಸ್ಥಳೀಯ ನ್ಯಾಯಾಲಯದ ಆದೇಶದಂತೆ ಮಹೇಶ್ ನೇಗಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.