
ಉತ್ತರ ಪ್ರದೇಶದ ಬಸ್ತಿ ಜಿಲ್ಲೆ ರಾಂಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಯಶ್ ರಾಜ್ ಮಿಶ್ರಾ ಎಂಬ 17 ವರ್ಷದ ಬಾಲಕ ಒಂದೇ ತಿಂಗಳಲ್ಲಿ ಎಂಟು ಬಾರಿ ಹಾವು ಕಡಿತಕ್ಕೊಳಗಾಗಿದ್ದಾನೆ.
ನನ್ನ ಮಗನನ್ನು ಮೂರನೆಯ ಬಾರಿಗೆ ಹಾವು ಕಚ್ಚಿದ ನಂತರ, ನಾನು ಅವನನ್ನು ಬಹದ್ದೂರ್ ಪುರ ಗ್ರಾಮದಲ್ಲಿರುವ ಸಂಬಂಧಿ ರಾಮ್ಜಿ ಶುಕ್ಲಾ ಅವರ ಮನೆಗೆ ಕಳುಹಿಸಿದೆ. ಕೆಲವು ದಿನಗಳ ನಂತರ, ನನ್ನ ಮಗ ಅದೇ ಹಾವನ್ನ ನೋಡಿದ್ದು ಅವನಿಗೆ ಮತ್ತೆ ಕಚ್ಚಿದೆ ಎಂದು ಯಶ್ ರಾಜ್ ಅವರ ತಂದೆ ಚಂದ್ರಮೌಳಿ ಮಿಶ್ರಾ ಹೇಳಿದ್ದಾರೆ. ಕೊನೆಯ ಘಟನೆ ಆಗಸ್ಟ್ 25 ರಂದು ನಡೆದಿದೆ.
ಈ ಹಾವು ಯಾಶರಾಜ್‌ನನ್ನು ಏಕೆ ಗುರಿಯಾಗಿಸಿಕೊಂಡಿದೆ ಎಂದು ನಮಗೆ ಅರ್ಥವಾಗುತ್ತಿಲ್ಲ. ಆ ಹುಡುಗ ಈಗ ಮಾನಸಿಕವಾಗಿ ತೊಂದರೆಗೀಡಾಗಿದ್ದಾನೆ ಮತ್ತು ಹಾವಿನ ನಿರಂತರ ಭಯದಿಂದ ಬದುಕುತ್ತಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ.
ನಾವು ಹಲವಾರು ಬಾರಿ ಪೂಜೆ ಮಾಡಿದ್ದೇವೆ ಮತ್ತು ಹಾವನ್ನು ಹಿಡಿಯುವವರನ್ನೂ ಕರೆದಿದ್ದೇವೆ, ಆದರೆ ಎಲ್ಲವೂ ನಿರರ್ಥಕ ಎಂದು ಹೇಳಿದರು.