alex Certify 3 ವಾರದ ಹಸುಗೂಸಿನೊಂದಿಗೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ವಾರದ ಹಸುಗೂಸಿನೊಂದಿಗೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಅಧಿಕಾರಿ

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡೋ ಮಹಿಳಾ ಸಿಬ್ಬಂದಿಗೆ 6 ತಿಂಗಳ ಹೆರಿಗೆ ರಜೆ ನೀಡಲಾಗುತ್ತೆ. ಆದರೆ ಉತ್ತರ ಪ್ರದೇಶದ ಸರ್ಕಾರಿ ಮಹಿಳಾ ಅಧಿಕಾರಿ ಮಾತ್ರ ಹೆರಿಗೆಯಾದ ಮೂರೇ ವಾರದಲ್ಲಿ ಕಚೇರಿಗೆ ಹಾಜರಾಗಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಮೂರು ವಾರದ ಮಗುವನ್ನ ಕಚೇರಿಗೆ ಕರೆದುಕೊಂಡು ಬರುವ ಮಹಿಳಾ ಉಪವಿಭಾಗದ ಮ್ಯಾಜಿಸ್ಟ್ರೇಟ್ ಸೌಮ್ಯ ಪಾಂಡೆ​​ ಕಚೇರಿ ಕೆಲಸದ ಜೊತೆ ಜೊತೆಯೇ ಮಗುವಿನ ಆರೈಕೆಯನ್ನೂ ಮಾಡುತ್ತಿದ್ದಾರೆ. ​​

ಉತ್ತರ ಪ್ರದೇಶದ ಮೋದಿ ನಗರದಲ್ಲಿರುವ ಸರ್ಕಾರಿ ಕಚೇರಿಯಲ್ಲಿ ಮಗುವನ್ನ ಆರೈಕೆ ಮಾಡ್ತಾ ಕರ್ತವ್ಯ ನಿರ್ವಹಿಸ್ತಾ ಇರೋ ಸೌಮ್ಯಾ ಪಾಂಡೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಾಕಷ್ಟು ಮಂದಿ ಸೌಮ್ಯ ಪಾಂಡೆ ಕೆಲಸಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಸೆಲ್ಯೂಟ್​ ಹೊಡೆದಿದ್ರೆ, ಇನ್ನು ಕೆಲವರು ಕೋವಿಡ್​ ನಂತಹ ಕಠಿಣ ಸಂದರ್ಭದಲ್ಲಿ ಇಂತಹ ನಿರ್ಧಾರ ಬೇಕಿತ್ತಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ .

2018ರಲ್ಲಿ ನ್ಯೂಝಿಲೆಂಡ್​ ಪ್ರಧಾನಿ ಜಸಿಂಡಾ ಅರ್ಡೆರ್ನ್ ತಮ್ಮ ಮೂರು ತಿಂಗ ಮಗುವನ್ನ ಅಸೆಂಬ್ಲಿಗೆ ಕರೆತರುವ ಮೂಲಕ ದಾಖಲೆ ಬರೆದಿದ್ದರು.

https://twitter.com/abhisheksing137/status/1315579207615881218?ref_src=twsrc%5Etfw%7Ctwcamp%5Etweetembed%7Ctwterm%5E1315579207615881218%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Fup-officer-skips-maternity-leaves-takes-three-weeks-old-baby-to-office-6722044%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...