ಉತ್ತರ ಪ್ರದೇಶದ ಮೀರತ್ ಜಿಲ್ಲಾಡಳಿತ ಗಣಿಗಾರಿಕೆ ನಡೆಸುವ ವಾಹನಗಳಿಗೆ ಮೈನ್ ಟ್ಯಾಗ್ನ್ನು ಕಡ್ಡಾಯಗೊಳಿಸಿದೆ. ಅಕ್ರಮ ಗಣಿಗಾರಿಕೆ ತಡೆಯುವ ಉದ್ದೇಶದಿಂದ ಈ ಟ್ಯಾಗ್ನ್ನು ಕಡ್ಡಾಯಗೊಳಿಸಲಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಗಣಿಗಾರಿಕೆ ಅಧಿಕಾರಿ ಸುಭಾಷ್ ಪ್ರಜಾಪತಿ, ಮರಳು, ಜಲ್ಲಿಗಳ ಅಕ್ರಮ ಗಣಿಗಾರಿಕೆ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಟ್ಯಾಗ್ನ ಸಹಾಯದಿಂದ ಅಕ್ರಮವಾಗಿ ಸಂಚರಿಸುವ ವಾಹನಗಳನ್ನ ಹಿಡಿಯೋದು ಸುಲಭವಾಗಲಿದೆ ಅಂತಾ ಹೇಳಿದ್ರು.
ಮೀರತ್ನಲ್ಲಿ ಈಗಾಗಲೇ 390 ವಾಹನಗಳನ್ನು ಗಣಿಗಾರಿಕೆಗೆ ನೋಂದಾಯಿಸಲಾಗಿದೆ. 120 ವಾಹನಗಳಿಗೆ ಗಣಿಗಾರಿಕೆ ಟ್ಯಾಗ್ ನೀಡಲಾಗಿದೆ. ಈ ಟ್ಯಾಗ್ನ ಬೆಲೆ 221 ರೂಪಾಯಿ ಇದ್ದು ಆನ್ಲೈನ್ ಮೂಲಕವೂ ಪಡೆಯಬಹುದಾಗಿದೆ.