ವಿಶ್ವದಾದ್ಯಂತ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತವೆ. ಜನರು ಐಷಾರಾಮಿ ಜೀವನಕ್ಕಾಗಿ ಏನು ಮಾಡಲೂ ಸಿದ್ಧರಿರ್ತಾರೆ. ಇದಕ್ಕೆ ಈಗ ಇನ್ನೊಂದು ಘಟನೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ವ್ಯಕ್ತಿಯೊಬ್ಬ ಮಾಡಿದ ಕೆಲಸ ದಂಗಾಗಿಸುತ್ತಿದೆ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ವ್ಯಕ್ತಿ ತನ್ನ ನವಜಾತ ಶಿಶುವನ್ನು ಮಾರಾಟ ಮಾಡಿದ್ದಾನೆ.
ಕೊರೊನಾ ಸಂದರ್ಭದಲ್ಲಿ ಎಲ್ಲರೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದ್ರೆ ಈ ಕಷ್ಟದ ಸಂದರ್ಭದಲ್ಲಿಯೂ ಕಾರಿನ ಆಸೆಗೆ ಬಿದ್ದ ವ್ಯಕ್ತಿ ಮಾಡಿದ ಕೆಲಸ ತಲೆ ತಗ್ಗಿಸುವಂತಿದೆ. ವಿಶೇಷವೆಂದ್ರೆ ಮಗು ಮಾರಾಟಕ್ಕೆ ಪತ್ನಿ ಕೂಡ ಸಹಕರಿಸಿದ್ದಾಳೆ ಎನ್ನಲಾಗಿದೆ. ಮೇ 13ರಂದು ಮಗುವಿನ ಅಜ್ಜ – ಅಜ್ಜಿ ಪೊಲೀಸರಿಗೆ ದೂರು ನೀಡಿದ್ದಾರೆ.
1.5 ಲಕ್ಷ ರೂಪಾಯಿಗೆ ಮಗುವನ್ನು ವ್ಯಾಪಾರಿಗೆ ಮಾರಾಟ ಮಾಡಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ. ಇಂದು ಪಾಲಕರ ವಿಚಾರಣೆ ನಡೆಯಲಿದೆ. ಸದ್ಯ ಮಗು ವ್ಯಾಪಾರಿ ಬಳಿಯಿದೆ ಎಂದು ಪೊಲೀಸರು ಹೇಳಿದ್ದಾರೆ.