ಅನುಮತಿ ಕೇಳದೇ ಗಡ್ಡ ಬೆಳೆಸಿದ್ದಾರೆ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಬಾಘ್ಪತ್ ಜಿಲ್ಲೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಎಸ್ಐ ಇಂತೇಸಾರ್ ಅಲಿ ಎಂಬವರು ಗಡ್ಡ ಬೆಳೆಸಿದ್ದ ಕಾರಣಕ್ಕೆ ಮೂರು ಬಾರಿ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿತ್ತು. ಆದರೂ ಸಹ ಗಡ್ಡ ಬೆಳೆಸಲು ಅನುಮತಿ ಕೋರದೇ ಅಲಿ ನಿರ್ಲಕ್ಷ್ಯ ತೋರಿದ್ದರು. ಹೀಗಾಗಿ ಅವರನ್ನ ಅಮಾನತು ಮಾಡಲಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಾಘ್ಪತ್ ಜಿಲ್ಲೆ ಪೊಲೀಸ್ ವರೀಷ್ಠಾಧಿಕಾರಿ ಅಭಿಷೇಕ್ ಸಿಂಗ್, ಪೊಲೀಸ್ ನಿಯಮಾವಳಿ ಅನ್ವಯ ಕೇವಲ ಸಿಖ್ ಧರ್ಮೀಯರಿಗೆ ಮಾತ್ರ ಗಡ್ಡ ಬಿಡಲು ಅನುಮತಿ ಇದೆ. ಇನ್ನುಳಿದಂತೆ ಎಲ್ಲರೂ ಕೂಡ ಕ್ಲೀನ್ ಶೇವ್ನಲ್ಲೇ ಇರಬೇಕು ಅಂತಾ ರೂಲ್ಸ್ ಇದೆ. ಬಲವಾದ ಕಾರಣವಿದ್ದರೆ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಅನ್ಯಧರ್ಮೀಯರು ಕೂಡ ಗಡ್ಡ ಬಿಡಬಹುದು. ಆದರೆ ಅಲಿ ಮೂರು ಬಾರಿ ಎಚ್ಚರಿಕೆ ಪಡೆದ ಬಳಿಕವೂ ಯಾರ ಬಳಿಯೂ ಅನುಮತಿ ಕೇಳಿರಲಿಲ್ಲ. ಹೀಗಾಗಿ ಅವರನ್ನ ಅಮಾನತು ಮಾಡಲಾಗಿದೆ ಅಂತಾ ಹೇಳಿದ್ರು.