ಕೊರೊನಾ ಹೆಚ್ಚಾಗ್ತಿರುವ ಮಧ್ಯೆ ಮಕ್ಕಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಮಕ್ಕಳಿಗೂ ಕೊರೊನಾ ಲಸಿಕೆ ಬರ್ತಿದೆ. ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮಕ್ಕಳಿಗೆ ಫಿಜರ್-ಬಯೋಟೆಕ್ ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಈ ಲಸಿಕೆಯನ್ನು 12–15 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುವುದು. ಇದು ಕೊರೊನಾ ವೈರಸ್ ವಿರುದ್ಧದ ಹೋರಾಟದ ಪ್ರಮುಖ ಹೆಜ್ಜೆ ಎಂದು ಎಫ್ಡಿಎ ವಿವರಿಸಿದೆ.
ಮಹಾಮಾರಿ ವಿರುದ್ಧ ಹೋರಾಡಲು ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಫಿಜರ್‌ನ ಹಿರಿಯ ಉಪಾಧ್ಯಕ್ಷ ಡಾ. ಬಿಲ್ ಗ್ರೂಬರ್ ಹೇಳಿದ್ದಾರೆ. ಎಫ್‌ಡಿಎ ಕಾರ್ಯನಿರ್ವಾಹಕ ಆಯುಕ್ತ ಡಾ. ಜಾನೆಟ್ ವುಡ್‌ಕಾಕ್, ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ವಿಸ್ತರಿಸುವುದರಿಂದ ಸಾಮಾನ್ಯ ಸ್ಥಿತಿಗೆ ಮರಳುವ ನಮ್ಮ ದಾರಿ ಸುಗಮವಾಗಲಿದೆ ಎಂದಿದ್ದಾರೆ. ಲಸಿಕೆ ಬಗ್ಗೆ ಎಲ್ಲ ರೀತಿಯ ಪರಿಶೀಲನೆ ನಡೆದಿದೆ. ಪಾಲಕರು ಮಕ್ಕಳಿಗೆ ಲಸಿಕೆ ನೀಡಬಹುದು. ಇದ್ರ ಬಗ್ಗೆ ಭಯಪಡುವ ಅಗತ್ಯವಿಲ್ಲವೆಂದಿದ್ದಾರೆ.
ರಾಜ್ಯ ರಾಜಧಾನಿಯ ಕೊರೊನಾ ಸೋಂಕಿನ ಕುರಿತು ತಜ್ಞರಿಂದ ಶಾಕಿಂಗ್ ಮಾಹಿತಿ
ಫಿಜರ್-ಬಯೋನೋಟೆಕ್‌ನ ಕೊರೊನಾ ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಯುಎಸ್ ಎಫ್‌ಡಿಎ ಹೇಳಿದೆ. 12–15 ವರ್ಷ ವಯಸ್ಸಿನ 2000 ಕ್ಕೂ ಹೆಚ್ಚು ಸ್ವಯಂಸೇವಕರಿಗೆ ಲಸಿಕೆ ಹಾಕಲಾಗಿದೆ ಎಂದು ಎಫ್ಡಿಎ ತಿಳಿಸಿದೆ. ವ್ಯಾಕ್ಸಿನೇಷನ್ ನಂತರ ಈ ಮಕ್ಕಳಲ್ಲಿ ಕೊರೊನಾ ಸೋಂಕಿನ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ ಎಂದು ಪರೀಕ್ಷಾ ಮಾಹಿತಿಯಲ್ಲಿ ಕಂಡು ಬಂದಿದೆ. ಕಂಪನಿಯು ತನ್ನ ಲಸಿಕೆ ಶೇಕಡಾ 100ರಷ್ಟು ಪರಿಣಾಮಕಾರಿ ಎಂದಿದೆ.