ಸಾಮಾಜಿಕ ಮಾಧ್ಯಮಗಳು ಬೆಳೆದಂತೆ ಅನೇಕ ಸುಳ್ಳು ಸುದ್ದಿಗಳು ಹೆಚ್ಚು ಹೆಚ್ಚು ಸದ್ದು ಮಾಡೋದನ್ನು ಹಾಗೂ ಅವೆಲ್ಲಾ ವೇಗವಾಗಿ ವೈರಲ್ ಆಗೋದನ್ನು ನೋಡುತ್ತಿದ್ದೇವೆ. ಇದೀಗ ಅಂತಹದ್ದೇ ಮತ್ತೊಂದು ಸುಳ್ಳು ಸುದ್ದಿ ಹರಿದಾಡಿತ್ತು.
ಮೊದಲು ಈ ಸುದ್ದಿ ನೋಡಿದವರು ನಂಬಿದ್ದರೇನೋ ಆದರೆ ಇದೀಗ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂಬುದು ತಿಳಿದು ಬಂದಿದೆ. ಹಾಗಾದ್ರೆ ಆ ಸುದ್ದಿ ಯಾವುದು ಅಂತೀರಾ ಮುಂದೆ ಓದಿ.
ಪ್ರತಿ ವರ್ಷ ನಡೆಸುವ ಯುಪಿಎಸ್ಸಿ ಪರೀಕ್ಷೆಯನ್ನು ಸಾಕಷ್ಟು ಜನ ಬರೆಯುತ್ತಾರೆ. ಈ ಪರೀಕ್ಷೆ ತೆಗೆದುಕೊಳ್ಳಲು ಇಂತಿಷ್ಟೇ ವಯಸ್ಸಿನ ಮಿತಿ ಇರಬೇಕು ಎಂಬುದು ಗೊತ್ತೇ ಇದೆ. ಆದರೆ ಈ ವಿಚಾರವಾಗಿ ಸುಳ್ಳು ಸುದ್ದಿಯೊಂದು ಹರಿದಾಡಿತ್ತು. ಈ ಪರೀಕ್ಷೆ ತೆಗೆದುಕೊಳ್ಳಲು ವಯಸ್ಸಿನ ಮಿತಿಯನ್ನು ಇಳಿಕೆ ಮಾಡಲಾಗಿದೆ ಎಂದು ಹೇಳಲಾಗಿತ್ತು.
32 ವರ್ಷದಿಂದ 26 ವರ್ಷಕ್ಕೆ ವಯಸ್ಸಿನ ಮಿತಿ ಇಳಿಸಲಾಗಿದೆ ಎಂಬ ಸುದ್ದಿಯ ಸ್ಕ್ರೀನ್ ಶಾಟ್ ಒಂದು ವೈರಲ್ ಆಗಿತ್ತು. ಆದರೆ ಇದನ್ನು ಪಿಐಪಿ ಫಾಸ್ಟ್ ಚೆಕ್ ವೇದಿಕೆ ಕ್ರಾಸ್ ಚೆಕ್ ಮಾಡಿದೆ. ಇಂತಹ ಯಾವುದೇ ಅಧಿಕೃತ ಪ್ರಕಟಣೆಯನ್ನು ಯುಪಿಎಸ್ಸಿ ಹೊರಡಿಸಿಲ್ಲ ಎಂಬುದು ತಿಳಿದುಬಂದಿದೆ.