alex Certify ಕಾಣೆಯಾದ ತಮ್ಮನ ಹುಡುಕಿಕೊಡಿ ಎಂದು ಮಹಿಳೆಯಿಂದ ಸಾಮಾಜಿಕ ಜಾಲತಾಣದ ಮೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಣೆಯಾದ ತಮ್ಮನ ಹುಡುಕಿಕೊಡಿ ಎಂದು ಮಹಿಳೆಯಿಂದ ಸಾಮಾಜಿಕ ಜಾಲತಾಣದ ಮೊರೆ

UP Woman Uses Social Media to Search for Missing Brother After Police Fail

ಕಾಣೆಯಾಗಿರುವ ತನ್ನ ತಮ್ಮನನ್ನು ಹುಡುಕಿಕೊಡಲು ಪೊಲೀಸರು ವಿಫಲರಾದ ಬಳಿಕ ಉತ್ತರ ಪ್ರದೇಶದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ.

ಮುಝಫ್ಫರ್‌ನಗರದಲ್ಲಿ ನಡೆದ ದುರ್ಘಟನೆಯೊಂದರಲ್ಲಿ ಐದು ದಿನಗಳ ಹಿಂದೆ ಆಲ್ಟೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಗಂಗಾ ಮೇಲ್ಕಾಲುವೆಯೊಳಗೆ ಬಿದ್ದುಬಿಟ್ಟಿದೆ.

ಕಾರಿನಲ್ಲಿದ್ದ ಎಲ್ಲ ನಾಲ್ವರೂ ದೆಹಲಿ ನಿವಾಸಿಗಳಾಗಿದ್ದರು. ಸ್ಥಳಕ್ಕೆ ಆಗಮಿಸಿದ ಈಜುಗಾರರು ಇ‌ಬ್ಬರು ಮಹಿಳೆಯರನ್ನು ಅಲ್ಲಿಂದ ಮೇಲೆತ್ತಿದ್ದಾರೆ. ಇವರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ ಇದೇ ಕಾರಿನಲ್ಲಿದ್ದ ಇನ್ನಿಬ್ಬರು ಯುವಕರಾದ ನಿಖಿಲ್ ಹಾಗೂ ಪ್ರವೀಣ್‌ರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.

ನಿಖಿಲ್ ಸಹೋದರಿ ಸೋನಂ ಕುಮಾರಿ ಈ ಬಗ್ಗೆ ಮಾತನಾಡಿ ತನ್ನ ತಮ್ಮನನ್ನು ಹುಡುಕಿಕೊಡಲು ಅಪೀಲ್ ಮಾಡಿದ್ದು, “ಐದು ದಿನಗಳು ಕಳೆದರೂ ಸಹ ನನ್ನ ತಮ್ಮ ಹಾಗೂ ಆತನ ಸ್ನೇಹಿತನನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ನನ್ನ ಕುಟುಂಬ ಬಹಳ ಚಿಂತಾಕ್ರಾಂತವಾಗಿದೆ. ನನ್ನ ತಮ್ಮನ ಬಗ್ಗೆ ಏನಾದರೂ ಮಾಹಿತಿ ಸಿಕ್ಕಲ್ಲಿ ತಿಳಿಸಲು ಜನರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.

ತನ್ನ 22ನೇ ಹುಟ್ಟುಹಬ್ಬ ಆಚರಿಸಲು ಮೂವರು ಗೆಳೆಯರೊಂದಿಗೆ ರಿಶಿಕೇಷಕ್ಕೆ ತೆರಳಿದ್ದ ನನ್ನ ಮಗನಿಗೆ ಎಷ್ಟು ಕೇಳಿಕೊಂಡರೂ ಕೇಳಲಿಲ್ಲ ಎಂದು ಆತನ ತಾಯಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...