ಸಹೋದ್ಯೋಗಿ ಗೆಳತಿಯೊಂದಿಗೆ ದೋಸೆ ತಿನ್ನುತ್ತಿದ್ದ ಗಂಡನನ್ನು ಹಿಡಿದು ಹೆಂಡತಿಯೇ ಪೊಲೀಸರಿಗೆ ಒಪ್ಪಿಸಿದ್ದಾಳೆ. ಆದರೆ, ಪೊಲೀಸರು ಯಾವುದೇ ಪ್ರಕರಣ ದಾಖಲಿಸದೆ, ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.
ಉತ್ತರ ಪ್ರದೇಶದ ಬಾಂದ ಜಿಲ್ಲೆ ಸಿವಿಲ್ ಲೈನ್ ಬಳಿ ಕಿರಿಯ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಗಂಡ, ತನ್ನ ಸಹೋದ್ಯೋಗಿ ಗೆಳತಿಯೊಂದಿಗೆ ಕಾರಿನಲ್ಲಿ ದೋಸೆ ತಿನ್ನುತ್ತಾ ಕುಳಿತಿದ್ದ.
ಇದೇ ಸಮಯಕ್ಕೆ ಸಹೋದರನೊಂದಿಗೆ ಬಂದ ಪತ್ನಿ, ಗಂಡನನ್ನು ಸಾಕ್ಷ್ಯ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದಳು. ತನ್ನ ಪತಿಗೆ ಅಕ್ರಮ ಸಂಬಂಧ ಇದೆ, ಇಬ್ಬರ ವಿರುದ್ಧವೂ ಕ್ರಮ ಜರುಗಿಸಬೇಕು. ದೂರು ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಹೆಂಡತಿ ಇಷ್ಟೆಲ್ಲ ಆರೋಪಗಳನ್ನು ಹೊರಿಸುತ್ತಿದ್ದರೂ ಪತಿ ಮಾತ್ರ ಒಂದು ಮಾತೂ ಆಡದೆ ಸುಮ್ಮನಿದ್ದ. ಯಾವುದೇ ದೂರು ದಾಖಲಿಸಿಕೊಳ್ಳದ ಪೊಲೀಸರು, ಎಚ್ಚರಿಕೆ ಕೊಟ್ಟು ಬುದ್ಧಿವಾದ ಹೇಳಿ ಕಳುಹಿಸಿದರು.