alex Certify ಕಿಡ್ನಾಪರ್ ಸಿಕ್ಕಿ ಬೀಳಲು ಕಾರಣವಾಯ್ತು ತಪ್ಪು ಸ್ಪೆಲ್ಲಿಂಗ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಡ್ನಾಪರ್ ಸಿಕ್ಕಿ ಬೀಳಲು ಕಾರಣವಾಯ್ತು ತಪ್ಪು ಸ್ಪೆಲ್ಲಿಂಗ್…!

ಇಂಗ್ಲೀಷ್​ ಭಾಷೆಯಲ್ಲಿ ಸ್ಪೆಲ್ಲಿಂಗ್​ ಮಿಸ್ಟೇಕ್​ ಮಾಡಿದ ಸುಳಿವಿನ ಮೇರೆಗೆ ಅಪಹರಣಕಾರರನ್ನ ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬಾಲಕನನ್ನ ಅಪಹರಣ ಮಾಡಿದ್ದ ರಾಮ್​ ಪ್ರಸಾದ್​ ಸಿಂಗ್​ ಮನೆಗೆ ಕಳುಹಿಸಿದ ಬೆದರಿಕೆ ಸಂದೇಶದಲ್ಲಿ ಪೊಲೀಸ್​ ಎಂದು ಬರೆಯೋ ಬದಲಾಗಿ ಪುಲ್ಲಿಶ್​ ಎಂದೂ, ಸೀತಾಪುರ ಎಂದು ಬರೆಯುವ ಬದಲಾಗಿ ಸೀತಾಪರ್​​ ಎಂದು ಬರೆದಿದ್ದ. ಇದೇ ಸುಳಿವನ್ನ ಬಳಸಿಕೊಂಡು 22 ವರ್ಷದ ರಾಮ್​ ಪ್ರಸಾದ್​ನನ್ನ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಸಂಡಿಲಾ ನಿವಾಸಿಯಾಗಿದ್ದ ಸಿಂಗ್​, ಹರ್ಡೋಯಿಯಲ್ಲಿ ಅಕ್ಟೋಬರ್​ 26ರಂದು 8 ವರ್ಷದ ಬಾಲಕನನ್ನ ಕಿಡ್ನಾಪ್​ ಮಾಡಿದ್ದ. ಇದಾದ ಬಳಿಕ 2 ಲಕ್ಷ ರೂಪಾಯಿ ಡಿಮ್ಯಾಂಡ್​ ಮಾಡಿ ಬಾಲಕನ ಕುಟುಂಬಕ್ಕೆ ಬೆದರಿಕೆ ಸಂದೇಶ ಕಳುಹಿಸಿದ್ದ. 2 ಲಕ್ಷ ರೂಪಾಯಿಯನ್ನ ಸೀತಾಪರ್​ಗೆ ತೆಗೆದುಕೊಂಡು ಬನ್ನಿ. ಪುಲ್ಲಿಶ್​ಗೆ ಹೇಳಲು ಹೋಗಬೇಡಿ. ಹೇಳಿದ್ರೆ ನಿಮ್ಮ ಮಗನನ್ನ ಸಾಯಿಸುತ್ತೇನೆ ಅಂತಾ ಬಾಲಕನ ತಂದೆಗೆ ಮೆಸೇಜ್​​ ಹಾಕಿದ್ದ.

ಆದರೆ ಬಾಲಕನ ಕುಟುಂಬಸ್ಥರು ನವೆಂಬರ್​ 4ರಂದು ಬೇನಿಗಂಜ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಮೊಬೈಲ್​ ನಂಬರ್​ ಟ್ರೇಸ್​ ಮಾಡಿದ ಪೊಲೀಸರು ಮೊಬೈಲ್​ ಮಾಲೀಕನನ್ನ ಪತ್ತೆ ಹಚ್ಚಿದ್ರು. ಆದರೆ ಆತ ಶಿಕ್ಷಿತನಾಗಿದ್ದ ಕಾರಣ ಆತ ಈ ರೀತಿ ತಪ್ಪುತಪ್ಪಾಗಿ ಮೆಸೇಜ್​ ಮಾಡಲು ಸಾಧ್ಯವಿಲ್ಲ ಅಂತಾ ಊಹಿಸಿದ್ದಾರೆ. ಇದಾದ ಬಳಿಕ ಸುಳಿವು ಭೇದಿಸುತ್ತಾ ಹೋದ ಪೊಲೀಸರು ಸಿಂಗ್​ನನ್ನ ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...