ಘಾಜಿಯಾಬಾದ್ನ ಮೂರು ಹಳ್ಳಿಯ ನಿವಾಸಿಗಳು ಸ್ಥಳೀಯ ಶಾಸಕ ನಂದ್ ಕಿಶೋರ್ ಗುರ್ಜರ್ಗೆ ಗ್ರಾಮಕ್ಕೆ ಆಗಮಿಸಲು ನಿಷೇಧ ಹೇರಿದ್ದಾರೆ.
ಪ್ರತಿಭಟನಾನಿರತ ರೈತರಿಗೆ ಗುರ್ಜರ್ ಬೆದರಿಕೆಯೊಡ್ಡಿದ್ದಾರೆ ಹಾಗೂ ಅಗೌರವ ತೋರಿದ್ದಾರೆ ಎಂಬ ಕಾರಣದಿಂದಾಗಿ ಗ್ರಾಮಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ.
ಬಿಜೆಪಿ ಶಾಸಕನಿಗೆ ಬಾಂಥ್ಲಾ, ಬೆಹ್ತಾ ಹಾಗೂ ಅಫ್ಜಲ್ಪುರ ನಿಸ್ತೋಲಿ ಗ್ರಾಮದಿಂದ ನಿಷೇಧ ಹೇರಲಾಗಿದೆ. ಪಂಚಾಯತ್ ಸದಸ್ಯರು ಗ್ರಾಮದೆಲ್ಲೆಡೆ ಈ ಸಂಬಂಧ ಬ್ಯಾನರ್ಗಳನ್ನ ಅಳವಡಿಸಿದ್ದಾರೆ.
ಆದರೆ ಈ ಎಲ್ಲಾ ಆರೋಪಗಳನ್ನ ಬಿಜೆಪಿ ಶಾಸಕ ನಂದ್ಕಿಶೋರ್ ನಿರಾಕರಿಸಿದ್ದಾರೆ. ಘಾಜಿಪುರದಲ್ಲಿ ರೈತ ಪ್ರತಿಭಟನೆಯನ್ನ ಮುನ್ನೆಡೆಸುತ್ತಿರುವ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಾಂಥ್ಲಾ ಗ್ರಾಮದಲ್ಲಿ ಲೋನಿ ಶಾಸಕ ನಂದ್ ಕಿಶೋರ್ ಗುರ್ಜರ್ರನ್ನ ಬಾಯ್ಕಾಟ್ ಮಾಡಲಾಗಿದೆ. ರೈತರನ್ನ ಅಗೌರಸುವ ಯಾರನ್ನೂ ಬಾಂಥಲಾ ಸಹಿಸೋದಿಲ್ಲ ಎಂದು ಬ್ಯಾನರ್ ಅಳವಡಿಸಲಾಗಿದೆ. ಇದೇ ರೀತಿಯ ಬ್ಯಾನರ್ನ್ನು ಅಫ್ಜಲ್ಪುರ, ನಿಸ್ತೋಲಿ ಗ್ರಾಮಗಳಲ್ಲೂ ಅಳವಡಿಸಲಾಗಿದೆ.