ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಸಂಸ್ಕೃತಿ ಇದೆ. ಪ್ರತಿಯೊಂದು ರಾಜ್ಯದಲ್ಲೂ ಅದರದ್ದೇ ಆದ ಆಹಾರ ಪದ್ಧತಿ ಇದೆ. ಇನ್ನು ಸ್ಟ್ರೀಟ್ ಫುಡ್ಗಳ ಬಗ್ಗೆಯಂತೂ ಕೇಳೊದೇ ಬೇಡ. ಒಬ್ಬೊಬ್ಬರು ಒಂದೊಂದು ವಿಧಾನದಲ್ಲಿ ಸ್ಟ್ರೀಟ್ ಫುಡ್ಗಳನ್ನ ತಯಾರಿಸುತ್ತಾರೆ. ಇದೀಗ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಹುಬ್ಬೇರಿಸಿದೆ.
ಫೇಸ್ಬುಕ್ನಲ್ಲಿ ಟ್ರಾವೆಲ್ ಬ್ಲಾಗರ್ ಅಮರ್ ಸಿರೋಹಿ ಎಂಬವರು ಶೇರ್ ಮಾಡಿದ ವಿಡಿಯೋದಲ್ಲಿ ಉತ್ತರ ಪ್ರದೇಶದ ಮಣಿಪುರದ ನಗರವೊಂದರಲ್ಲಿ ವ್ಯಕ್ತಿಯೊಬ್ಬ ಮರಳನ್ನ ಬಳಸಿ ಆಲೂಗಡ್ಡೆಯನ್ನ ಬೇಯಿಸಿದ್ದಾನೆ.
ಬಿಸಿ ಬಿಸಿ ಮರಳಿನ ನಡುವೆ ಆಲೂಗಡ್ಡೆಗಳನ್ನ ಇರಿಸಲಾಗುತ್ತೆ. 20 ನಿಮಿಷಗಳ ಸಮಯದಲ್ಲಿ ಆಲೂಗಡ್ಡೆಗಳು ಬೆಂದು ಬಿಡ್ತಾವೆ. ಆಲೂಗಡ್ಡೆ ಚರ್ಮ ಕಪ್ಪಾಯ್ತು ಅಂದರೆ ಅದು ಬೆಂದಿದೆ ಎಂದರ್ಥ. ಇದಾದ ಬಳಿಕ ಈ ಆಲೂಗಡ್ಡೆಗಳನ್ನ ಬಿದಿರಿನ ಬಾಸ್ಕೆಟ್ನಲ್ಲಿ ಹಾಕಲಾಗುತ್ತೆ.
ಆಲೂಗಡ್ಡೆಗಳು ಬಿಸಿ ಇರೋದ್ರಿಂದ ಬಾಸ್ಕೆಟ್ನಲ್ಲಿ ಸಿಪ್ಪೆ ತೆಗೆಯಲಾಗುತ್ತೆ. ಅಂದಹಾಗೆ ಈ ಆಲೂಗಡ್ಡೆಗಳು ಸವಿಯಲು ಸಿದ್ಧವಾಗಿವೆ. ಇದನ್ನ ಮಸಾಲೆ ಚಟ್ನಿ, ಸಾಂಬಾರ ಪುಡಿ ಹಾಗೂ ಬೆಣ್ಣೆಯ ಜೊತೆಗೆ ಸವಿಯಲು ನೀಡ್ತಾರೆ.
ಇದು ಗೋಲ್ಬಜಾರ್ನಲ್ಲಿ ಸಿಗುವ ವಿಶೇಷ ಖಾದ್ಯವಾಗಿದ್ದು, ಮಣಿಪುರದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ವಿಶೇಷ ರೀತಿಯಲ್ಲಿ ತಯಾರಾದ ಆಲೂಗಡ್ಡೆಯ ಈ ಖಾದ್ಯ ನೆಟ್ಟಿಗರ ಬಾಯಲ್ಲಿ ನೀರೂರಿಸಿದೆ.