ಫೇಸ್ ಮಾಸ್ಕ್ ಧರಿಸದ ಕಾರಣಕ್ಕೆ 10000 ರೂಪಾಯಿ ಸ್ವೀಕರಿಸಿದ ದೇಶದ ಮೊದಲ ವ್ಯಕ್ತಿ ಎಂಬ ಕುಖ್ಯಾತಿಗೆ ಡಿಯೋರಿಯಾ ಮೂಲದ ಅಮನ್ ಪಾತ್ರರಾಗಿದ್ದಾರೆ.
ಫೇಸ್ ಮಾಸ್ಕ್ ಧರಿಸದ ಕಾರಣಕ್ಕೆ ಈ ವ್ಯಕ್ತಿ ಎರಡನೇ ಬಾರಿಗೆ ದಂಡ ಸ್ವೀಕರಿಸಿದ್ದಾರೆ. ಈ ಹಿಂದೆ ಬರಿಯಾರಪುರ ಪೊಲೀಸ್ ಸರ್ಕಲ್ನಲ್ಲಿ ಅವರಿಗೆ ಮಾಸ್ಕ್ ಹಾಕದ್ದಕ್ಕೆ 1ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು.
ಇನ್ನು ಈ ವಿಚಾರವಾಗಿ ಮಾತನಾಡಿದ ಸ್ಟೇಷನ್ ಹೌಸ್ ಅಧಿಕಾರಿ ಟಿ.ಜೆ. ಸಿಂಗ್, ಅಮರ್ಜಿತ್ ಮಾಸ್ಕ್ ಇಲ್ಲದೇ ಸಾರ್ವಜನಿಕ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ವೇಳೆ ಪೊಲೀಸರು ಈತನನ್ನ ಹಿಡಿದಿದ್ದು 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಏಪ್ರಿಲ್ 18ರಂದು ಅಮರ್ಗೆ 1000 ರೂಪಾಯಿ ದಂಡ ವಿಧಿಸಲಾಗಿತ್ತು. ಅಲ್ಲದೇ ಮಾಸ್ಕ್ನ್ನೂ ಪೊಲೀಸರು ನೀಡಿದ್ದರು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೊರೊನಾ ಕೇಸ್ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಹೀಗಾಗಿ ಉತ್ತರ ಪ್ರದೇಶ ಸರ್ಕಾರ ಮೊದಲ ಬಾರಿಗೆ ಮಾಸ್ಕ್ ಧರಿಸದೇ ಸಿಕ್ಕಿ ಹಾಕಿಕೊಂಡರೆ 1000 ರೂಪಾಯಿ ಹಾಗೂ ಎರಡನೇ ಬಾರಿ 10 ಸಾವಿರ ರೂಪಾಯಿ ದಂಡ ನಿಗದಿ ಮಾಡಿದೆ.