
ನಿಷ್ಠೆಗೆ ಇನ್ನೊಂದು ಹೆಸರು ನಾಯಿ. ಇದಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಕಾನ್ಪುರದಲ್ಲಿ ನಾಯಿ ಪ್ರೀತಿ ಎಲ್ಲರನ್ನು ಅಚ್ಚರಿಗೊಳಿಸಿದೆ. ನಾಯಿ ತನ್ನ ಮಾಲೀಕಳನ್ನು ಕಳೆದುಕೊಂಡಿದ್ದಾಳೆ. ಅವಳ ಕೊನೆ ಯಾತ್ರೆ ನೋಡಿದ ನಾಯಿ ಕಣ್ಣಲ್ಲಿ ನೀರು ಬಂದಿದೆ.
ಇಷ್ಟೇ ಅಲ್ಲ ಇದ್ರಿಂದ ದುಃಖಗೊಂಡ ನಾಯಿ ಆತ್ಮಹತ್ಯೆ ಮಾಡಿಕೊಂಡಿದೆ. ಮನೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದೆ. ಘಟನೆ ಕಾನ್ಪುರದ ಬಾರ್ರಾ ಪ್ರದೇಶದಲ್ಲಿ ನಡೆದಿದೆ. ನಾಯಿಯನ್ನು 13 ವರ್ಷಗಳ ಹಿಂದೆ ಮನೆಗೆ ತರಲಾಗಿತ್ತು. ಮೃತಳ ಪತಿ ಆರೋಗ್ಯ ಇಲಾಖೆಯಲ್ಲಿ ಜಂಟಿ ನಿರ್ದೇಶಕರು. ಮಗ ವೈದ್ಯ. ಮಹಿಳೆ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದಳು. ಅನೇಕ ದಿನಗಳಿಂದ ಹಾಸಿಗೆ ಹಿಡಿದಿದ್ದಳು.
ಮೃತಳು ಕೂಡ ವೈದ್ಯಳಾಗಿದ್ದಳಂತೆ. ಇಬ್ಬರ ಮಧ್ಯೆ ಪ್ರೀತಿ ಹೆಚ್ಚಿತ್ತು. ಮಹಿಳೆ ಶವ ನೋಡಿದ ನಾಯಿ ನಾಲ್ಕನೇ ಮಹಡಿ ಏರಿದೆ. ಅಲ್ಲಿಂದ ಕೆಳಗೆ ಬಿದ್ದ ನಾಯಿ ಅನಿತಾ ಶವ ನೋಡಲು ತಲೆ ಎತ್ತುವ ಪ್ರಯತ್ನ ನಡೆಸಿತ್ತಂತೆ.