ವಿಶಿಷ್ಟವಾದ ದಾಖಲೆಯೊಂದಕ್ಕೆ ಉತ್ತರ ಪ್ರದೇಶ ಪಾತ್ರವಾಗಿದೆ. ಈ ರಾಜ್ಯದ ಜೈಲುಗಳಲ್ಲಿರುವ ಖೈದಿಗಳ ಪೈಕಿ 727 ಮಂದಿ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಹೊಂದಿದವರಾಗಿದ್ದಾರೆ. ಜೊತೆಗೆ 2,010 ಮಂದಿ ಖೈದಿಗಳು ಸ್ನಾತಕೋತ್ತರ ಪದವೀಧರರಾಗಿದ್ದಾರೆ.
ದೇಶದಲ್ಲಿರುವ ಜೈಲುಗಳಲ್ಲಿ ಒಟ್ಟಾರೆ 3740 ಖೈದಿಗಳು ತಾಂತ್ರಿಕ ಡಿಗ್ರಿ ಹೊಂದಿರುವವರಾಗಿದ್ದು, ಉ.ಪ್ರ. ಹೊರತು ಪಡಿಸಿದಂತೆ ಮಹಾರಾಷ್ಟ್ರದಲ್ಲಿ 495 ಹಾಗೂ ಕರ್ನಾಟಕದಲ್ಲಿ 362 ಮಂದಿ ’ಸುಶಿಕ್ಷಿತ’ ಖೈದಿಗಳಿದ್ದಾರೆ.
ದೇಶಾದ್ಯಂತ ಇರುವ ಜೈಲುಗಳಲ್ಲಿ 3,30,487 ಖೈದಿಗಳಿದ್ದು, ಇವರ ಪೈಕಿ 5,282 ಮಂದಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಒಟ್ಟಾರೆ ಖೈದಿಗಳ ಪೈಕಿ 1.67 % ಸ್ನಾತಕೋತ್ತರರಾಗಿದ್ದು, 1.2% ಇಂಜಿನಿಯರ್‌ಗಳಾಗಿದ್ದಾರೆ.