ಲಖನೌ:ತಿಂದ ತಿಂಡಿಗೆ ಹಣ ಕೇಳಿದ್ದಕ್ಕೆ ಬೀದಿ ಬದಿ ವ್ಯಾಪಾರಿ ಹಾಗೂ ಅವರ ಮಗನನ್ನು ಕುದಿಯುವ ಎಣ್ಣೆಗೆ ನೂಕಿದ ಘಟನೆ ಲಖನೌ ಗೋಮತಿ ನಗರದಲ್ಲಿ ನಡೆದಿದೆ.
ಗೋಮತಿ ನಗರದಲ್ಲಿ ಬೀದಿ ಬದಿಯಲ್ಲಿ ರಾಮನಾಥ ಯಾದವ್ ತಿಂಡಿ ವ್ಯಾಪಾರ ನಡೆಸಿದ್ದರು. ಮಕ್ಕಳಾದ ರಂಜಿತ್ ಹಾಗೂ ಪ್ರದೀಪ ಅವರಿಗೆ ಸಹಾಯ ಮಾಡುತ್ತಿದ್ದರು. ಡಿ.26 ರ ರಾತ್ರಿ 8 ಗಂಟೆ ಸುಮಾರಿಗೆ ಆಗಮಿಸಿದ ಕೆಲವು ಯುವಕರು ಸಮೋಸಾ ಹಾಗೂ ಪೂರಿ ತಿಂದಿದ್ದರು. ಅದರ ಹಣ ಕೇಳಿದ್ದಕ್ಕೆ ಸಿಟ್ಟುಗೊಂಡು ಹಲ್ಲೆ ನಡೆಸಿದ್ದಾರೆ.
ರಾಮನಾಥ ಹಾಗೂ ಮಗ ಪ್ರದೀಪ ಇಬ್ಬರಿಗೂ ಸುಟ್ಟು ಗಾಯವಾಗಿದೆ. ಇಬ್ಬರೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯುಪಿಯಲ್ಲಿ ಇತ್ತೀಚೆಗಷ್ಟೇ ಬೀದಿ ವ್ಯಾಪಾರಿ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಅದು ಮಾಸುವ ಮೊದಲೇ ಮತ್ತೊಂದು ಘಟನೆ ನಡೆದಿದೆ.