ಕ್ಯಾನ್ಸರ್ನಿಂದ ಬಳಲುತ್ತಿರುವ ಬಡ ಮಹಿಳೆಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ಲಕ್ನೋನ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯಕ್ಕೆ ಅಲಹಾಬಾದ್ ಹೈಕೋರ್ಟ್ ತಿಳಿಸಿದೆ.
ನಿರುದ್ಯೋಗಿ ಯುವಕನ ಮನವಿ ಮೇರೆಗೆ ಅಲಹಬಾದ್ ಹೈಕೋರ್ಟ್ನ ಲಕ್ನೋ ನ್ಯಾಯಪೀಠ ಡಾ. ರಾಮ್ ಮನೋಹರ್ ಲೋಹಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ತಜ್ಞರು ಕ್ಯಾನ್ಸರ್ ರೋಗಿಗೆ ಉಚಿತ ಚಿಕಿತ್ಸೆ ನೀಡಲು ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯಕ್ಕೆ ಸಹಕರಿಸುವಂತೆ ಹೇಳಿದೆ.
ಮಹಿಳೆಗೆ ಉಚಿತ ಚಿಕಿತ್ಸೆಗೆ ಆದೇಶ ನೀಡುವ ವೇಳೆ ಲಕ್ನೋ ನ್ಯಾಯಪೀಠದ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ಹಾಗೂ ಮನೀಷ್ ಕುಮಾರ್, ಮಹಿಳೆಗೆ ಈವರೆಗೆ ನೀಡಿದ ಚಿಕಿತ್ಸೆಯ ವಿವರ ಸಲ್ಲಿಸುವಂತೆ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಿದೆ.
ಸ್ವತಂತ್ರ ಪತ್ರಕರ್ತನ ನಿರುದ್ಯೋಗಿ ಪುತ್ರ ಸೌಹಾರ್ದ್ ಲಖನ್ಪಾಲ್ ಎಂಬವರು ಈ ಅರ್ಜಿಯನ್ನ ಸಲ್ಲಿಸಿದ್ರು.