ಮಹಿಳೆಯ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ವಿಶೇಷ ಮಹಿಳಾ ಪಡೆಯೊಂದರನ್ನು ರಚಿಸಿದೆ.
ದಿನದ 24 ಗಂಟೆಯೂ ಕೆಲಸ ಮಾಡುವ ಈ ಗಸ್ತು ಪಡೆಗೆ ’ಪಿಂಕ್ ಪ್ಯಾಟ್ರೋಲ್’ ಎಂದು ಹೆಸರಿಟ್ಟಿದ್ದು, ನವರಾತ್ರಿಯ ಆರಂಭದಂದು ಚಾಲನೆ ಕೊಡಲಾದ ಮಿಶನ್ ಶಕ್ತಿ ಅಭಿಯಾನದ ಭಾಗವಾಗಿ ಈ ಪಡೆಯನ್ನು ರಚಿಸಲಾಗಿದೆ. ಬಹಳ ಕಠಿಣವಾಗಿ ತರಬೇತಿ ಪಡೆದ 250 ಮಹಿಳಾ ಪೊಲೀಸರನ್ನು ಈ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ.
ಉತ್ತರ ಪ್ರದೇಶದ ಕಾನ್ಪುರ, ಆಗ್ರಾ, ಗೋರಖ್‌ಪುರ, ವಾರಣಾಸಿ, ಪ್ರಯಾಗ್‌ರಾಜ್, ಮೀರತ್, ನೋಯಿಡಾ, ಘಾಜಿಯಾಬಾದ್ ಹಾಗೂ ಮೊರಾದಾಬಾದ್‌ನಲ್ಲಿ ಈ ಪಿಂಕ್ ಪ್ಯಾಟ್ರೋಲ್ ಪಡೆಗಳನ್ನು ಸ್ಥಾಪಿಸುವ ಉದ್ದೇಶವನ್ನು ಯೋಗಿ ಆದಿತ್ಯನಾಥ್ ಸರ್ಕಾರ ಹೊಂದಿದೆ.