
ಕೋವಿಡ್-19 ಸಂಕಷ್ಟದ ನಡುವೆಯೇ ಬಂದಿರುವ ಈ ವರ್ಷದ ದೀಪಾವಳಿ ಸಮಯದಲ್ಲಿ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ವಿನೂತನವಾಗಿ ಆಚರಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ.
ಈ ಸಂದರ್ಭಕ್ಕಾಗಿ ಆನ್ಲೈನ್ ಮೂಲಕ ದೀಪ ಬೆಳಗಲು ಭಕ್ತಗಣಕ್ಕೆ ಉತ್ತರ ಪ್ರದೇಶ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ನವೆಂಬರ್ 13ರಂದು ನಡೆಯಲಿರುವ ದೀಪೋತ್ಸವದ ವೇಳೆ 5.5 ಲಕ್ಷ ದೀಪಗಳನ್ನು ಬೆಳಗಲಾಗುವುದು.
ಇದೇ ಆನ್ಲೈನ್ ವ್ಯವಸ್ಥೆ ಮೂಲಕವೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೀಪೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವಿಶೇಷ ಪೋರ್ಟಲ್ ಮೂಲಕ ವರ್ಚುವಲ್ ದೀಪಗಳನ್ನು ಬೆಳಗಲು ಶ್ರೀರಾಮಚಂದ್ರನ ಭಕ್ತಾದಿಗಳಿಗೆ ಅನುವು ಮಾಡಿಕೊಡಲಾಗಿದೆ.