alex Certify ಈ ʼಕಾರ್ಡ್ʼ‌ ಧರಿಸಿದ್ರೆ ಬರೋಲ್ವಂತೆ ಕೊರೊನಾ…! ಹಣ ಗಳಿಸಲು ವಂಚಕರಿಂದ ಹೊಸ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼಕಾರ್ಡ್ʼ‌ ಧರಿಸಿದ್ರೆ ಬರೋಲ್ವಂತೆ ಕೊರೊನಾ…! ಹಣ ಗಳಿಸಲು ವಂಚಕರಿಂದ ಹೊಸ ವಿಧಾನ

UP Doctors Warn Against 'Corona Card' Being Sold as a 'Cure' to Deadly Infection

ಕೊರೊನಾ ವೈರಸ್‌ಗಿಂತ ಮಾರಕವಾಗಿರುವ ಸುಳ್ಳು ಸುದ್ದಿಗಳು ಹಾಗೂ ವದಂತಿಗಳ ನಡುವೆ, ಈ ಸೋಂಕಿಗೆ ಮದ್ದನ್ನು ಕೊಡುವುದಾಗಿ ವಂಚನೆ ಮಾಡುವ ವ್ಯವಸ್ಥಿತ ಜಾಲಗಳು ಜನರಿಗೆ ಪಂಗನಾಮ ಹಾಕುತ್ತಿವೆ.

ಉತ್ತರ ಪ್ರದೇಶದಲ್ಲಿ ಇಂಥದ್ದೇ ಜಾಲವೊಂದು, ಕೊರೊನಾ ಕಾರ್ಡ್‌ಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳನ್ನು ಕುತ್ತಿಗೆ ಸುತ್ತ ಧರಿಸಿದರೆ ವೈರಸ್‌ ತಗುಲುವುದಿಲ್ಲ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ. ಈ ಕಾರ್ಡ್‌‌ಗಳಿಗೆ ಫ್ಯಾನ್ಸಿ ಹೆಸರುಗಳಿದ್ದು, ‘Shut Out Corona’, ‘Corona out’ ಹಾಗೂ ‘Go Corona’ ಎಂದೆಲ್ಲಾ ಕರೆಯಲಾಗುತ್ತಿದೆ. 75 ರೂ.ಗಳಿಂದ 130 ರೂ.ಗಳ ನಡುವೆ ಸಿಗುವ ಈ ಕಾರ್ಡ್‌ಗಳನ್ನು ಹಾಕಿಕೊಂಡರೆ ವೈರಸ್ ಸೋಕು ತಗುಲುವುದಿಲ್ಲ ಎಂದು ನಂಬಿಕೊಂಡಿರುವ ಅನೇಕ ಮಂದಿ, ಅವುಗಳನ್ನು ಕತ್ತಿಗೆ ನೇತುಹಾಕಿಕೊಂಡು, ಎಲ್ಲೆಂದರಲ್ಲಿ ಸುತ್ತುತ್ತಿದ್ದಾರೆ.

ಮಾರಾಟ ಮಾಡಲಾಗುತ್ತಿರುವ ಈ ಕಾರ್ಡ್‌ಗಳಿಗೆ ಯಾವುದೇ ಮಾನ್ಯತೆ ಕೊಟ್ಟಿಲ್ಲ ಮತ್ತು ಹಬ್ಬಿಸಲಾಗುತ್ತಿರುವ ಸುದ್ದಿಯಲ್ಲೂ ಯಾವುದೇ ಹುರುಳಿಲ್ಲ ಎಂದು ಕಾನ್ಪುರದ ಜಿ.ವಿ.ಎಸ್.ಎಂ. ವೈದ್ಯಕೀಯ ಕಾಲೇಜಿನ ಸಹ ಪ್ರಾಂಶುಪಾಲರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...