ಸಾರ್ವಜನಿಕ ಬಳಕೆಗೆ ಸರ್ಕಾರದ ವತಿಯಿಂದ ಅಳವಡಿಸಲಾಗಿದ್ದ ಬೋರ್ವೆಲ್ ಪಂಪ್ನ್ನ ಮುಟ್ಟಿದ ಎಂಬ ಕಾರಣಕ್ಕೆ 45 ವರ್ಷದ ದಲಿತ ವ್ಯಕ್ತಿಗೆ ಸ್ಥಳೀಯರು ಮನಬಂದಂತೆ ಥಳಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶ ಬಾಂಡಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಬಿಸಂದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ರಾಮಚಂದ್ರ ರೈದಾಸ್ ಕುಟುಂಬ ಬೆಳಗ್ಗೆ ತೆಂಡೂರ ಗ್ರಾಮದಲ್ಲಿ ಬೋರ್ವೆಲ್ನಿಂದ ನೀರು ತೆಗೆದುಕೊಳ್ಳಲು ಹೋದಾಗ ಗ್ರಾಮಸ್ಥರು ಕೋಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ ಅಂತಾ ಸ್ಟೇಷನ್ ಹೌಸ್ ಅಧಿಕಾರಿ ನರೇಂದ್ರ ಪ್ರತಾಪ್ ಸಿಂಗ್ ಮಾಹಿತಿ ನೀಡಿದ್ರು.
ಗ್ರಾಮಸ್ಥರು ನಡೆಸಿದ ದಾಳಿಯಿಂದ ರೈದಾಸ್ ಗಾಯಗೊಂಡಿದ್ದು ಅವರನ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.