ಸರ್ಕಾರಿ ಪಿಂಚಣಿ ಹಣ ಪಡೆಯುತ್ತಿದ್ದ ಮಹಿಳೆಯ ಬಳಿ ಪತಿಗೆ ಪ್ರತಿ ತಿಂಗಳ ಖರ್ಚನ್ನ ನೀಡಿ ಅಂತಾ ಉತ್ತರ ಪ್ರದೇಶದ ಕೌಟುಂಬಿಕ ನ್ಯಾಯಾಲವೊಂದು ಆದೇಶ ನೀಡಿದೆ,
ಪಿಂಚಣಿ ಪಡೆಯುತ್ತಿದ್ದ ಮಹಿಳೆ ತನ್ನ ಪತಿಯಿಂದ ದೂರಾಗಿ ವಾಸಿಸುತ್ತಿದ್ದರು. ಆದರೆ 2013ರಲ್ಲಿ ಹಿಂದೂ ಮ್ಯಾರೇಜ್ ಆಕ್ಟ್, 1955ರ ಅಡಿಯಲ್ಲಿ ಪತಿ ತನಗೆ ಪತ್ನಿಯಿಂದ ಜೀವನಾಂಶ ಬೇಕೆಂದು ಅರ್ಜಿ ಸಲ್ಲಿಸಿದ್ದ. ಈ ವಿಚಾರಣೆಯನ್ನ ಕೈಗೆತ್ತಿಕೊಂಡಿದ್ದ ಕೌಟುಂಬಿಕ ನ್ಯಾಯಾಲಯ ಈ ತೀರ್ಪನ್ನ ನೀಡಿದೆ.
ಈ ಆದೇಶದ ಅನ್ವಯ ಪ್ರತಿ ತಿಂಗಳು 12 ಸಾವಿರ ಪಿಂಚಣಿ ಪಡೆಯುತ್ತಿರುವ ಮಹಿಳೆ ಇನ್ಮುಂದೆ ಪ್ರತಿ ತಿಂಗಳು 1000 ರೂಪಾಯಿಯನ್ನ ಪತಿಗೆ ಜೀವನಾಂಶದ ರೂಪದಲ್ಲಿ ನೀಡಬೇಕಿದೆ.