alex Certify ಗೂಗಲ್​ ಸಿಇಓ ವಿರುದ್ಧ UP ಪೊಲೀಸರಿಂದ ಕೇಸ್: ಬಳಿಕ ಸುಂದರ್‌ ಪಿಚ್ಚೈ ಹೆಸರು ಕೈ ಬಿಟ್ಟ ಅಧಿಕಾರಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್​ ಸಿಇಓ ವಿರುದ್ಧ UP ಪೊಲೀಸರಿಂದ ಕೇಸ್: ಬಳಿಕ ಸುಂದರ್‌ ಪಿಚ್ಚೈ ಹೆಸರು ಕೈ ಬಿಟ್ಟ ಅಧಿಕಾರಿಗಳು

ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾನಹಾನಿ ಮಾಡುವಂತಹ ವಿಡಿಯೋವನ್ನ ಗೂಗಲ್‌ ನಲ್ಲಿ ಹರಿಬಿಟ್ಟ ಕಾರಣ ಉತ್ತರ ಪ್ರದೇಶದ ವಾರಣಾಸಿ ಪೊಲೀಸರು ಗೂಗಲ್​ ಸಿಇಓ ಸುಂದರ್​ ಪಿಚ್ಚೈ ಸೇರಿದಂತೆ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಳಿಕ ಎಫ್​ಐಆರ್​ನಿಂದ ಸುಂದರ್​ ಪಿಚ್ಚೈ ಹೆಸರನ್ನ ತೆಗೆದು ಹಾಕಲಾಗಿದೆ.‌

ಪ್ರಕರಣದಲ್ಲಿ ಇವರ ಪಾತ್ರ ಕಾಣದ ಹಿನ್ನೆಲೆಯಲ್ಲಿ ವಾರಣಾಸಿ ಪೊಲೀಸರು ಸುಂದರ್​ ಪಿಚ್ಚೈ ಹಾಗೂ ಮೂವರು ಅಧಿಕಾರಿಗಳ ಹೆಸರನ್ನ ಎಫ್​ಐಆರ್​ ಪಟ್ಟಿಯಿಂದ ತೆಗೆದು ಹಾಕಿದ್ದಾರೆ ಎಂದು ಪೊಲೀಸ್​ ಉನ್ನತಾಧಿಕಾರಿ ಮಾಹಿತಿ ನೀಡಿದ್ದಾರೆ.

ಯುಟ್ಯೂಬ್​​​ನಲ್ಲಿ 5 ಲಕ್ಷ ವೀವ್ಸ್​ ಕಂಡಿದ್ದ ವಿಡಿಯೋ ಹಾಗೂ ವಾಟ್ಸಾಪ್​ ಗ್ರೂಪ್​​ನಲ್ಲಿ ಕಾಣಿಸಿಕೊಂಡ ವಿಡಿಯೋ ಬಗ್ಗೆ ನಾನು ವಿರೋಧ ವ್ಯಕ್ತಪಡಿಸಿದ ಬಳಿಕ 8500ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರನ್ನ ಆಧರಿಸಿ ಪೊಲೀಸರು ಈ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ಸುಂದರ್​ ಪಿಚ್ಚೈ ಸೇರಿದಂತೆ ಗೂಗಲ್​ ಇಂಡಿಯಾದ ಮುಖ್ಯಸ್ಥ ಸಂಜಯ್​ ಕುಮಾರ್​ ಗುಪ್ತಾ ವಿರುದ್ಧ ದೂರನ್ನು ದಾಖಲಿಸಲಾಗಿತ್ತು. ಫೆಬ್ರವರಿ 6ನೇ ತಾರೀಖಿನಂದು ಉತ್ತರ ಪ್ರದೇಶದ ಭೇಲಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ ಪ್ರಕರಣ ಸಂಬಂಧ ಗೂಗಲ್​ ಸಂಸ್ಥೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಐಪಿಸಿ ಸೆಕ್ಷನ್​ 504 ( ಶಾಂತಿ ಉಲ್ಲಂಘನೆ), 506(ಕ್ರಿಮಿನಲ್​ ಬೆದರಿಕೆ), 500(ಮಾನಹಾನಿ) ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...