ಮೀರತ್ ಜಿಲ್ಲೆಯನ್ನ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ನಿರ್ಧರಿಸಿರುವ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ಗಂಗಾಜಲದಿಂದ ಹಾಗೂ ಚಂದನವನ್ನ ಠಾಣೆಗೆ ಬರುವ ಪ್ರತಿಯೊಬ್ಬರಿಗೂ ನೀಡ್ತಿದ್ದಾರೆ.
ನೌಚಂದಿ ಪೊಲೀಸ್ ಠಾಣೆಯ ಎಸ್ಹೆಚ್ಓ ಪ್ರೇಮ್ ಚಂದ್ ಶರ್ಮಾ ಠಾಣೆಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಗಂಗಾಜಲವನ್ನ ಸಿಂಪಡಿಸಿ ಬಳಿಕ ಚಂದನವನ್ನ ಅವರ ಹಣೆಗೆ ಹಚ್ಚುತ್ತಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಎಸ್ಹೆಚ್ಓ ಶರ್ಮಾ, ನೌಚಂದಿ ಠಾಣೆಗೆ ಗಂಗಾಜಲದ ಬಾಟಲಿ ಹಿಡಿದು ಬರೋದನ್ನ ಕಾಣಬಹುದಾಗಿದೆ. ಈ ವಿಡಿಯೋವನ್ನ ಪತ್ರಕರ್ತ ಪಿಯೂಷ್ ರೈ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಶರ್ಮಾ, ಚಂದನ ಹಾಗೂ ಗಂಗಾಜಲಕ್ಕೆ ಠಾಣೆಗೆ ಭೇಟಿ ನೀಡುವ ಪ್ರತಿಯೊಬ್ಬರನ್ನ ಶಾಂತ ಮಾಡುವ ಶಕ್ತಿ ಇದೆ ಎಂದು ಹೇಳಿದ್ರು.
ಅಲ್ಲದೇ ಗಂಗಾಜಲ ಹಾಗೂ ಚಂದನದ ಬಳಕೆಯಿಂದಾಗಿ ಠಾಣೆಗೆ ಭೇಟಿ ನೀಡಿದ ಪ್ರತಿಯೊಬ್ಬರೂ ಶಾಂತರಾಗಿದ್ದನ್ನ ನಾನು ಗಮನಿಸಿದ್ದೇನೆ ಎಂದು ಶರ್ಮಾ ಹೇಳಿದ್ದಾರೆ.
ಠಾಣೆಗೆ ಭೇಟಿ ನೀಡುವ ಪ್ರತಿಯೊಬ್ಬರನ್ನ ಗಂಗಾಜಲ ಹಾಗೂ ಚಂದನವನ್ನ ಲೇಪಿಸುವ ಮೂಲಕ ಶರ್ಮಾ ಸ್ಯಾನಿಟೈಸ್ ಮಾಡ್ತಾರೆ. ಅಲ್ಲದೇ ಈ ವೇಳೆ ಶರ್ಮಾ ಮಂತ್ರವನ್ನೂ ಪಠಿಸುತ್ತಾರೆ. ಅಲ್ಲದೇ ಠಾಣೆಗೆ ಭೇಟಿ ನೀಡುವವರಿಗೆ ಗಂಗಾಜಲವನ್ನ ಉಡುಗೊರೆ ರೂಪದಲ್ಲಿ ನೀಡ್ತಾರೆ.