alex Certify ಮದುವೆಯಾದ ದಿನವೇ ಚಿನ್ನಾಭರಣ ಸಮೇತ ವಧು ಎಸ್ಕೇಪ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ದಿನವೇ ಚಿನ್ನಾಭರಣ ಸಮೇತ ವಧು ಎಸ್ಕೇಪ್..​..!

ಮದುವೆಯಾಗಿ ಕೇವಲ ಐದೇ ಗಂಟೆಗಳಲ್ಲಿ ಪತ್ನಿ ನಾಪತ್ತೆಯಾದ್ದ ವಿಚಿತ್ರ ಘಟನೆ ಉತ್ತರ ಪ್ರದೇಶ ಪೋವಾಯನ್​ ಏರಿಯಾದಲ್ಲಿ ನಡೆದಿದೆ. ಚಿನ್ನ ಹಾಗೂ ನಗದಿನ ಸಮೇತ ವಧು ಮನೆಯಿಂದ ಎಸ್ಕೇಪ್​ ಆಗಿದ್ದಾಳೆ. 34 ವರ್ಷದ ವರ ಶಹಜಾನ್​ಪುರ ಠಾಣೆಯಲ್ಲಿ ಕೇಸ್​ ದಾಖಲಿಸಿದ್ದಾರೆ.

ರೈತನ ಮಗನಾಗಿದ್ದ ವರನಿಗೆ ಯಾವುದೇ ಹೆಣ್ಣು ಸಿಗದ ಕಾರಣ ಆತನ ಅತ್ತಿಗೆ ಫಾರುಖಾಬಾದ್​ನ ಬಡ ಕುಟುಂಬದ ಮನೆಯ ಯುವತಿಯನ್ನ ಮದುವೆಯಾಗುವಂತೆ ಸಲಹೆ ನೀಡಿದ್ದರು. ಮದುವೆಯ ಸಿದ್ಧತೆಗಾಗಿ ಅವರು 30 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.

ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾದ ಬಾಲಕಿ: ಸುಮೋಟೊ ಕೇಸ್ ದಾಖಲು

ಫಾರೂಕಾಬಾದ್​ನ ದೇವಸ್ಥಾನವೊಂದರಲ್ಲಿ ಈ ಮದುವೆ ಕಾರ್ಯಕ್ರಮ ನೆರವೇರಿತ್ತು. ಇದಾದ ಬಳಿಕ ವಧು ವರನ ಮನೆಗೆ ಆಗಮಿಸಿದ್ದಳು. ಎಲ್ಲಾ ಶಾಸ್ತ್ರ ಮುಗೀತು ಅನ್ನೋವಷ್ಟರಲ್ಲಿ ನವವಿವಾಹಿತೆ ಚಿನ್ನ ಹಾಗೂ ಹಣದ ಸಮೇತ ಎಸ್ಕೇಪ್​ ಆಗಿದ್ದಾಳೆ.

ವಧುವನ್ನ ಹುಡುಕಲು ವಿಫಲರಾದ ಕುಟುಂಬ ರವಿವಾರ ಪೊಲೀಸ್​ ಠಾಣೆಗೆ ದೂರು ನೀಡಿದೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...