alex Certify ಛಾಯಾಗ್ರಾಹಕನ ಕಣ್ಣಿಗೆ ಬಿದ್ದ ಅಪರೂಪದ ಪಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಛಾಯಾಗ್ರಾಹಕನ ಕಣ್ಣಿಗೆ ಬಿದ್ದ ಅಪರೂಪದ ಪಕ್ಷಿ

UP Architect Spots Rare Greenish Warbler Bird in Gorakhpur

ಪ್ರತಿ ವರ್ಷ ಆಗಸ್ಟ್‌ ವೇಳೆ ಯೂರೋಪ್‌ನಿಂದ ಭಾರತಕ್ಕೆ ಹಾರಿ ಬರುವ ಗ್ರೀನಿಸ್ ವಾಬ್ಲರ್‌ ಹೆಸರಿನ ಅಪರೂಪದ ತಳಿಗೆ ಸೇರಿದ ಹಕ್ಕಿಯೊಂದು ಉತ್ತರ ಪ್ರದೇಶದ ಛಾಯಾಗ್ರಾಹಕರೊಬ್ಬರ ಕಣ್ಣಿಗೆ ಬಿದ್ದಿದೆ.

ಇಲ್ಲಿನ ರಪ್ತಿ ಸಾಗರ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ಛಾಯಾಗ್ರಾಹಕ ಅನುಪಮ್ ಅಗರ್ವಾಲ್‌ಗೆ ಈ ಪಕ್ಷಿ ಕಾಣಿಸಿಕೊಂಡಿದೆ. ಗುಬ್ಬಚ್ಚಿಯಂತೆ ಕಾಣುವ ಈ ಪುಟಾಣಿ ಪಕ್ಷಿಯನ್ನು ಪತ್ತೆ ಮಾಡುವುದು ಬಹಳ ಕಷ್ಟ.

ವನ್ಯಜೀವಿ ಛಾಯಾಗ್ರಾಹಕರಾದ ಅಗರ್ವಾಲ್‌ ಮರದ ರೆಂಬೆಗಳ ಮೇಲೆ ಆಟವಾಡುತ್ತಿದ್ದ ಈ ಪಕ್ಷಿಯ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಆಗಸ್ಟ್‌ನಲ್ಲಿ ಉತ್ತರ ಭಾರತಕ್ಕೆ ಬರುವ ಈ ಪಕ್ಷಿಗಳು ನವೆಂಬರ್‌ ವೇಳಗೆ ದಕ್ಷಿಣ ಭಾರತದತ್ತ ಬರುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...