ಟ್ರಾಫಿಕ್ ನಿಯಮ ಉಲ್ಲಂಘನೆ ದಂಡದಿಂದ ತಪ್ಪಿಸಿಕೊಳ್ಳಬೇಕು ಅಂತಾ ಬೈಕ್ ಸವಾರ ಪೊಲೀಸನ ಮೇಲೆಯೇ ಬೈಕ್ ಹರಿಸಿಕೊಂಡು ಹೋದ ಘಟನೆ ಹರಿಯಾಣದ ಫತೇಬಾದ್ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಬಳಿಕ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಸಂಬಂಧ ಪೊಲೀಸರು ಆರೋಪಿ ಹಾಗೂ ಮತ್ತಾತನ ಸ್ನೇಹಿತರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಪೊಲೀಸ್ರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೊಲೀಸ್ ಅಧಿಕಾರಿ ರಸ್ತೆ ಬದಿಯಲ್ಲಿ ಚಲನ್ ನೀಡುತ್ತಿದ್ದ ವೇಳೆ ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.
ಸಿರ್ಸಾ ರಸ್ತೆಯಲ್ಲಿ ನಿಂತಿದ್ದ ಪೊಲೀಸ್ ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ಚಲನ್ ನೀಡುತ್ತಿದ್ದರು. ಆರೋಪಿ ತನ್ನ ಇಬ್ಬರು ಸ್ನೇಹಿತರನ್ನ ಬೈಕ್ ಮೇಲೆ ಕೂರಿಸಿಕೊಂಡು ಬರ್ತಿದ್ದ ಎನ್ನಲಾಗಿದೆ.
ಪೊಲೀಸರ ಕೈಗೆ ಸಿಕ್ಕರೆ ದಂಡ ಬೀಳುತ್ತೆ ಎಂಬ ಭಯದಿಂದ ಬೈಕ್ ಸವಾರ ವೇಗವಾಗಿ ಗಾಡಿಯನ್ನ ಓಡಿಸಿದ್ದಾನೆ. ಪರಿಣಾಮ ಬೈಕ್ ಈತನ ನಿಯಂತ್ರಣ ತಪ್ಪಿದ್ದು ಈ ಅವಘಡ ಸಂಭವಿಸಿದೆ.
ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ 2014ರಿಂದ ಹೆಚ್ಚಿನ ಅಪಘಾತಗಳು ವೇಗದ ಚಾಲನೆಯಿಂದಲೇ ಉಂಟಾಗುತ್ತಿದೆ. ಡ್ರೈವಿಂಗ್ ಲೈಸೆನ್ಸ್ ನೀಡುವ ವೇಳೆ ನಿರ್ಲಕ್ಷ್ಯ ತೋರೋದ್ರಿಂದಲೇ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ.