ನವದೆಹಲಿ: ಆಗಸ್ಟ್ 1 ರಿಂದ ಅನ್ ಲಾಕ್ 3.0 ಜಾರಿಯಾಗಲಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ.
ಬೆಳಗ್ಗೆ ನಡೆಯಲಿರುವ ಸಭೆಯಲ್ಲಿ ಯಾವುದಕ್ಕೆಲ್ಲ ವಿನಾಯಿತಿ ಸಿಗಬಹುದು ಎಂದು ಚರ್ಚೆ ನಡೆದಿದೆ. ಸಿನಿಮಾ ಥಿಯೇಟರ್, ಜಿಮ್, ಈಜುಕೊಳಕ್ಕೆ ಅನುಮತಿ ಸಿಗಬಹುದೆಂದು ಹೇಳಲಾಗಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದೇ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆ ಉತ್ತೇಜನಕ್ಕೆ ಅನೇಕ ಚಟುವಟಿಕೆ ಆರಂಭಕ್ಕೆ ಅನುಮತಿ ನೀಡಲಾಗಿದೆ. ಅನ್ ಲಾಕ್ 3.0 ರಲ್ಲಿ ಶಾಲೆಗಳನ್ನು ತೆರೆಯುವುದು ಅನುಮಾನ. ಖಾಸಗಿ ಕೋಚಿಂಗ್ ಸೆಂಟರ್ ಗಳು ಮತ್ತು ಕಾಲೇಜುಗಳನ್ನು ತೆರೆಯಲು ಷರತ್ತುಬದ್ಧ ಅನುಮತಿ ನೀಡುವ ಸಾಧ್ಯತೆಯಿದೆ.
ಮೆಟ್ರೋ ಸಂಚಾರ ನಿಷೇಧ ಮುಂದುವರೆಯಲಿದೆ. ಪೂರ್ಣಪ್ರಮಾಣದಲ್ಲಿ ರೈಲು ಸಂಚಾರ ಇರುವುದಿಲ್ಲ. ಶೇಕಡ 25ರಷ್ಟು ಪ್ರೇಕ್ಷಕರೊಂದಿಗೆ ಸಿನಿಮಾ ಮಂದಿರ ಓಪನ್ ಮಾಡಲು ಅನುಮತಿ ನೀಡಬಹುದು, ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ಅವಕಾಶ ನೀಡಬಹುದು. ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಉಳಿದೆಡೆ ಮತ್ತಷ್ಟು ವಿನಾಯಿತಿ ಸಿಗಬಹುದು ಎಂದು ಹೇಳಲಾಗಿದೆ.