ಅನ್ಲಾಕ್ 3.0 ದಿನಗಣನೆ ಶುರುವಾಗಿದ್ದು, ಸಿನಿಮಾ ಥಿಯೇಟರ್. ಜಿಮ್, ಈಜುಕೊಳ ಓಪನ್ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ. ಆದರೆ ಸದ್ಯಕ್ಕೆ ಶಾಲೆ ಮತ್ತು ಮೆಟ್ರೋ ಆರಂಭಕ್ಕೆ ಅನುಮತಿ ಸಿಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ ಲಾಕ್ಡೌನ್ ಸಡಿಲಗೊಳಿಸಿ ವಿವಿಧ ವಾಣಿಜ್ಯ ಚಟುವಟಿಕೆಗಳ ಆರಂಭಕ್ಕೆ ಅವಕಾಶ ನೀಡಲಾಗಿತ್ತು. ಅನ್ ಲಾಕ್ 2.0 ಜುಲೈ 31ಕ್ಕೆ ಕೊನೆಯಾಗಲಿದೆ. ಅನ್ಲಾಕ್ 3.0 ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು.
ಮಾರ್ಚ್ ನಿಂದಲೂ ಬಂದ್ ಆಗಿರುವ ಈಜುಕೊಳ, ಜಿಮ್, ಸಿನಿಮಾ ಮಂದಿರ ಪುನಾರಂಭಕ್ಕೆ ಹೆಚ್ಚಿನ ಒತ್ತಡ ಕೇಳಿಬಂದಿದೆ. ಆರ್ಥಿಕತೆ ಉದ್ದೇಶದಿಂದ ಇವುಗಳಿಗೆ ವಿನಾಯಿತಿ ಸಿಗಬಹುದು ಎಂದು ಹೇಳಲಾಗಿದೆ. ಆದರೆ ಶಾಲೆ, ಸಭೆ, ಸಮಾರಂಭ ಮತ್ತು ಮೆಟ್ರೋ ಸಂಚಾರಕ್ಕೆ ಸದ್ಯಕ್ಕೆ ಅವಕಾಶವಿಲ್ಲ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೈಲು, ವಿಮಾನ, ಮೆಟ್ರೋ ಸಂಚಾರ, ಸಭೆ-ಸಮಾರಂಭ, ಶಾಲಾ-ಕಾಲೇಜುಗಳಿಗೆ ನಿರ್ಬಂಧ ಮುಂದುವರೆಯಲಿದೆ ಎನ್ನಲಾಗಿದೆ.