ಕೊರೊನಾ ಸಂಕಷ್ಟದಲ್ಲಿ ಸುಮಾರು 4 ತಿಂಗಳ ನಂತರ ಸರ್ಕಾರವು ಜಿಮ್ ತೆರೆಯಲು ಅನುಮತಿ ನೀಡಿದೆ. ಅನ್ಲಾಕ್ 3 ಮಾರ್ಗಸೂಚಿ ಬಿಡುಗಡೆಯಾಗಿದ್ದು, ಅದ್ರಲ್ಲಿ ಜಿಮ್ ತೆರೆಯಲು ಒಪ್ಪಿಗೆ ಸಿಕ್ಕಿದೆ. ಆಗಸ್ಟ್ 5 ರಿಂದ ಜಿಮ್, ಯೋಗ ಸಂಸ್ಥೆಗಳು ತೆರೆಯಲಿವೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. .
ಜಿಲ್ ಗೆ ಹೋಗಬಯಸುವವರು ಹೆಚ್ಚಿನ ಎಚ್ಚರಿಕೆಯನ್ನೂ ತೆಗೆದುಕೊಳ್ಳಬೇಕು. ಕೊರೊನಾ ವೈರಸ್ ನಿಂದ ರಕ್ಷಿಸಲು ಜಿಮ್ ಮಾಲೀಕರು ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ತಿದ್ದಾರೆ. ಅವ್ರಿಗೆ ಬೆಂಬಲ ನೀಡುವ ಅನಿವಾರ್ಯತೆಯಿದೆ. ಜಿಮ್ ತುಂಬಿದ್ದರೆ ಅವಸರ ಮಾಡಬೇಡಿ. ಜನರು ಹೊರಗೆ ಬಂದ ಮೇಲೆ ನಿಧಾನವಾಗಿ ಒಳಗೆ ಹೋಗಿ.
ಜಿಮ್ ನಲ್ಲಿ ವಸ್ತುಗಳನ್ನು ಮುಟ್ಟುವ ಮೊದಲು ಕೈಗೆ ಹ್ಯಾಂಡ್ ಗ್ಲೌಸ್ ಹಾಕಿ.
ಸ್ಯಾನಿಟೈಜರ್ ನಿಮ್ಮ ಬಳಿ ಇಟ್ಟುಕೊಳ್ಳಿ. ಗ್ಲೌಸ್ ಧರಿಸದೆ ತಾಲೀಮು ಮಾಡುತ್ತಿದ್ದರೆ, ಆಗಾಗ ಹ್ಯಾಂಡ್ ಸ್ಯಾನಿಟೈಜರ್ ನಿಂದ ಕೈ ಸ್ವಚ್ಛಗೊಳಿಸಿ.
ಮಾಸ್ಕನ್ನು ಕಡ್ಡಾಯವಾಗಿ ಧರಿಸಿ. ತುಂಬಾ ದಣಿವಾದಾಗ ದೊಡ್ಡದಾಗಿ ಉಸಿರಾಡುತ್ತೇವೆ. ಮಾಸ್ಕ್ ಧರಿಸಿದ್ದರೆ ಉಸಿರಾಡಲು ಸಮಸ್ಯೆಯಾಗಬಹುದು ಎನ್ನುತ್ತಾರೆ ತಜ್ಞರು.
ಸ್ವಲ್ಪ ಅನಾರೋಗ್ಯವಿದ್ದರೂ ಜಿಮ್ ಗೆ ಹೋಗಬೇಡಿ. ಶೀತ ಮತ್ತು ಜ್ವರ ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಬೇರೆಯವರನ್ನು ನಿಮ್ಮಿಂದ ದೂರವಿಡಿ.
ಜಿಮ್ನಿಂದ ಬಂದ ಕೂಡಲೇ ಸ್ನಾನ ಮಾಡಬಾರದು ಎನ್ನಲಾಗುತ್ತದೆ. ಆದರೆ ಈ ಕೊರೊನಾ ಸಂದರ್ಭದಲ್ಲಿ ಸ್ನಾನ ಅನಿವಾರ್ಯವಾಗಿದೆ. ಜಿಮ್ ನಿಂದ ಬಂದ ತಕ್ಷಣ ವಾಶ್ರೂಮ್ಗೆ ಹೋಗಿ ನಿಮ್ಮ ಬಟ್ಟೆ, ಬೂಟು ಇತ್ಯಾದಿಗಳನ್ನು ತೊಳೆಯಿರಿ. ಸ್ನಾನ ಮಾಡಿ.
ಸಾಮಾಜಿಕ ದೂರವನ್ನು ಸಂಪೂರ್ಣವಾಗಿ ನೋಡಿಕೊಳ್ಳಿ. ಜನರಿಂದ 6 ಅಡಿ ದೂರವಿರಿ.