ಅಂತಿಮ ಅನ್ಲಾಕ್ ಸಮಯ ಬಂದಿದೆ. ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್ಐಸಿಸಿಐ) ಕೆಲವೊಂದು ಸಲಹೆ ನೀಡಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಕೆಲಸ ಮತ್ತು ಗಳಿಕೆ ಬಗ್ಗೆ ಗಮನ ನೀಡುವುದು ಬಹಳ ಮುಖ್ಯವಾಗಿದೆ ಎಂದು ಎಫ್ಐಸಿಸಿಐ ಹೇಳಿದೆ.
ಅನ್ಲಾಕ್ 3.0 ನಲ್ಲಿ ಮಾಲ್, ಮಲ್ಟಿಪ್ಲೆಕ್ಸ್ ತೆರೆಯಬೇಕೆಂದು ಎಫ್ಐಸಿಸಿಐ ಶಿಫಾರಸ್ಸು ಮಾಡಿದೆ. 25 ರಷ್ಟು ಆಸನಗಳೊಂದಿಗೆ ಸಿನೆಮಾ ಹಾಲ್ಗಳು ತೆರೆಯಬೇಕು. ದೀರ್ಘ ಮಧ್ಯಂತರಗಳನ್ನು ನೀಡಬೇಕು. ಸಿನೆಮಾ ಸಭಾಂಗಣಗಳನ್ನು ನಿರಂತರವಾಗಿ ಸ್ವಚ್ಛಗೊಳಿಸಬೇಕು. ಜಿಮ್ಗಳು ಮತ್ತು ಫಿಟ್ನೆಸ್ ಕೇಂದ್ರಗಳನ್ನು ಸಹ ಅನ್ಲಾಕ್ ಮಾಡಬೇಕೆಂದು ಎಫ್ಐಸಿಸಿಐ ಹೇಳಿದೆ.
ಪ್ರಯಾಣ ನಿರ್ಬಂಧಗಳನ್ನು ತೆಗೆದುಹಾಕಬೇಕೆಂದು ಎಫ್ಐಸಿಸಿಐ ಸೂಚಿಸಿದೆ. ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಕಾರಿಡಾರ್ ಪ್ರಸ್ತಾಪಿಸಲಾಗಿದೆ. ನೆಗೆಟಿವ್ ಕೋವಿಡ್ ಪ್ರಮಾಣಪತ್ರದೊಂದಿಗೆ ಪ್ರಯಾಣವನ್ನು ಅನುಮತಿಸಬೇಕು ಎಂದು ಎಫ್ಐಸಿಸಿಐ ಹೇಳುತ್ತದೆ.
ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಮೆಟ್ರೋ ಕೂಡ ತೆರೆಯಬೇಕೆಂದು ಸಲಹೆ ನೀಡಿದೆ. ದೈಹಿಕ ಸಂಪರ್ಕವಿಲ್ಲದ ಕ್ರೀಡೆಗಳು ಪ್ರಾರಂಭವಾಗಬೇಕು. ಟೆನಿಸ್, ಓಟ, ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳನ್ನು ಪ್ರಾರಂಭಿಸಬೇಕು. ನಕಾರಾತ್ಮಕ ಕೊರೊನಾ ಪರೀಕ್ಷಾ ಪ್ರಮಾಣಪತ್ರದೊಂದಿಗೆ ಆಟಗಳನ್ನು ನಡೆಸಬೇಕೆಂದಿದೆ.
ಎಫ್ಐಸಿಸಿಐ, ಹೋಟೆಲ್ ಅನ್ಲಾಕ್ ಯೋಜನೆಯನ್ನು ಸೂಚಿಸಿದೆ. ಶೇಕಡಾ 50 ರಷ್ಟು ಅತಿಥಿಯೊಂದಿಗೆ ಹೊಟೇಲ್ ನಲ್ಲಿಯೇ ಆಹಾರ ಸೇವನೆಗೆ ಅವಕಾಶ ನೀಡಬೇಕು ಎಂದಿದೆ.
ಮಾಲ್ಗಳು, ಮಲ್ಟಿಪ್ಲೆಕ್ಸ್ ಗಳು, ಫಿಟ್ನೆಸ್, ಸಾಮಾಜಿಕ ದೂರ ಮತ್ತು ಮುನ್ನೆಚ್ಚರಿಕೆಯೊಂದಿಗೆ ಜಿಮ್ ಕೇಂದ್ರಗಳನ್ನು ತೆರೆಯಲು ಸೂಚಿಸಲಾಗಿದೆ. ಆದರೆ ದೇಶದಲ್ಲಿ ಕೊರೊನಾ ಸೋಂಕು ಪ್ರತಿದಿನ 50,000 ಗಡಿ ಸಮೀಪಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಅಂತಿಮ ಅನ್ಲಾಕ್ ನತ್ತ ಹೇಗೆ ಸಾಗಬೇಕು? ಕೊರೊನಾ ಮತ್ತು ಕೆಲಸದ ಮಧ್ಯೆ ಸಮತೋಲನ ಸಾಧಿಸುವುದು ಹೇಗೆ ಎಂಬ ಪ್ರಶ್ನೆ ಎದ್ದಿದೆ.