ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ಬುಧವಾರ ದೇಶದ 24 ನಕಲಿ ವಿಶ್ವವಿದ್ಯಾನಿಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಸಂಸ್ಥೆಗಳು ಉತ್ತರ ಪ್ರದೇಶದಲ್ಲಿವೆ. ಯುಜಿಸಿ ಕಾರ್ಯದರ್ಶಿ ರಜನೀಶ್ ಮಾತನಾಡಿ, ಯುಜಿಸಿ ಕಾಯ್ದೆಯನ್ನು ಉಲ್ಲಂಘಿಸಿ ಪ್ರಸ್ತುತ 24 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದವರು ಹೇಳಿದ್ದಾರೆ.
ನಕಲಿ ಸಂಸ್ಥೆಗಳ ಬಗ್ಗೆ ಜಾಗೃತರಾಗಿರಿ ಎಂದು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಲಾಗಿದೆ. ಅವುಗಳನ್ನು ನಕಲಿ ವಿಶ್ವವಿದ್ಯಾಲಯಗಳೆಂದು ಘೋಷಿಸಲಾಗಿದೆ. ಅವು ಯಾವುದೇ ಪದವಿ ನೀಡುವ ಹಕ್ಕನ್ನು ಹೊಂದಿಲ್ಲ ಎಂದು ರಜನೀಶ್ ಹೇಳಿದ್ದಾರೆ.
ಈ ಪೈಕಿ ಎಂಟು ವಿಶ್ವವಿದ್ಯಾಲಯಗಳು ಉತ್ತರ ಪ್ರದೇಶದಲ್ಲಿವೆ. ದೆಹಲಿಯಿಂದ ಏಳು ಮತ್ತು ಒಡಿಶಾ ಮತ್ತು ಪಶ್ಚಿಮ ಬಂಗಾಳದ ತಲಾ ಎರಡು ವಿಶ್ವವಿದ್ಯಾಲಯಗಳಿವೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪುದುಚೇರಿ ಮತ್ತು ಮಹಾರಾಷ್ಟ್ರಗಳಲ್ಲಿ ಅಂತಹ ಒಂದು ನಕಲಿ ವಿಶ್ವವಿದ್ಯಾಲಯಗಳಿವೆ. ಬೆಳಗಾವಿಯಲ್ಲಿರುವ ಬಡಗಾಂವ್ ಸರ್ಕಾರ್ ವರ್ಲ್ಡ್ ಒಪನ್ ವಿವಿಯನ್ನು ನಕಲಿ ಪಟ್ಟಿಯಲ್ಲಿ ಸೇರಿಸಲಾಗಿದೆ.