ಮಂಗಳ ಗ್ರಹದ ಸುತ್ತ ಹೊಳೆಯುವ ಹಸಿರು ಅನಿಲದ ಪಟ್ಟಿಯೊಂದು ಕಾಣಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಎಕ್ಸೊ ಮಾರ್ಸ್ ಆರ್ಬಿಟರ್ ಎಂಬ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೋ ಬಿಡುಗಡೆ ಮಾಡಿದ್ದು, ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಮೀಥೇನ್ ಹಾಗೂ ಇತರ ಅನಿಲ ಪದಾರ್ಥ ಹೊಳೆಯುವ ಹಸಿರು ಪಟ್ಟಿಯಲ್ಲಿ ಇರಬಹುದು ಎಂದು ಖಗೋಳ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ನೇಚರ್ ಅಸ್ಟ್ರಾನಾಮಿ ಎಂಬ ಅಧ್ಯಯನ ಜರ್ನಲ್ ಒಂದರ ಪ್ರಕಾರ, ಅದು ಗ್ರಹದ ವಾತಾವರಣದಲ್ಲಿರುವ ಆಮ್ಲಜನಕವಾಗಿದೆ.
“ಖಗೋಳ ವಿಜ್ಞಾನಿಗಳು ಮಂಗಳನ ಕಕ್ಷೆಯಲ್ಲಿ ಆಮ್ಲಜಮಕದಂಥ ಅನಿಲ ಕಂಡು ಬಂದಿದ್ದು, ಸೂರ್ಯನ ಕಿರಣಗಳ ಪ್ರಭಾವದಿಂದ ಅವುಗಳ ಬಣ್ಣ ಹಸಿರಾಗಿ ಹೊಳೆಯುತ್ತದೆ” ಎಂದು ವರದಿಯಾಗಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಖಗೋಳಶಾಸ್ತ್ರಜ್ಞರು ಟ್ವಿಟರ್ ನಲ್ಲಿ ಇದನ್ನೇ ತಿಳಿಸಿದ್ದು, ಕೆಂಪು ಗ್ರಹದ ಸುತ್ತ ಹೊಳೆಯುವ ಆಮ್ಲಜನಕ ಪತ್ತೆ ಎಂದು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಭೂಮಿ ಬಿಟ್ಟು ಬೇರೆ ಗ್ರಹದಲ್ಲಿ ಆಮ್ಲಜನಕ ನೋಡಿದ್ದೇವೆ ಎಂದು ವಿವರಿಸಿದ್ದಾರೆ. ಟ್ವಿಟರ್ ನಲ್ಲಿ ಅದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಕೆಲವರು ಹಾಸ್ಯಮಯ ಪ್ರತಿಕ್ರಿಯೆ ನೀಡಿದ್ದಾರೆ.