
ಕೇಂದ್ರ ಸಚಿವ ಮತ್ತು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ರಾಮದಾಸ್ ಅಠವಳೆ ಕೊರೊನಾ ಪಾಸಿಟಿವ ಆಗಿದ್ದಾರೆ. ಮಂಗಳವಾರ ವರದಿ ಪಾಸಿಟಿವ್ ಬಂದ್ಮೇಲೆ ಅವರನ್ನು ಬಾಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋ ಕೊರೊನಾ ಗೋ ಎಂಬ ಘೋಷಣೆಯನ್ನು ಅಠವಳೆ ನೀಡಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿತ್ತು. ರಾಮದಾಸ್ ಅಠವಳೆಗೆ ಕೊರೊನಾ ಕಾಣಿಸಿಕೊಳ್ತಿದ್ದಂತೆ ನಟಿ ಪಾಯಲ್ ಘೋಷ್ ಸೇರಿದಂತೆ ಅನೇಕ ಜನರು ಕೋವಿಡ್ -19 ಪರೀಕ್ಷೆಗೆ ಒಳಗಾಗಬೇಕಿದೆ. ಸೋಮವಾರ ರಾಮದಾಸ್ ಅಠವಳೆ, ಪಾಯಲ್ ಘೋಷ್ ಗೆ ಪಕ್ಷದ ಸದಸ್ಯತ್ವ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ಜನರು ಉಪಸ್ಥಿತರಿದ್ದರು. ಇವರೆಲ್ಲರಿಗೂ ಈಗ ಪರೀಕ್ಷೆ ಅನಿವಾರ್ಯವಾಗಿದೆ.
ಅಠವಳೆಗಿಂತ ಮೊದಲು ಮಹಾರಾಷ್ಟ್ರದ ಉಪ ಸಿಎಂ ಅಜಿತ್ ಪವಾರ್ ಮತ್ತು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆ ಮಟ್ಟದಲ್ಲಿ ರೋಗಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. 3645 ಜನರು ಸೋಂಕಿಗೆ ಒಳಗಾಗಿದ್ದರೆ, 9905 ಜನರು ಚೇತರಿಸಿಕೊಂಡಿದ್ದಾರೆ. 84 ರೋಗಿಗಳು ಸಾವನ್ನಪ್ಪಿದ್ದಾರೆ.