alex Certify ಬಿಗ್​ ನ್ಯೂಸ್​: ಹೆದ್ದಾರಿ ನಿರ್ಮಾಣ ಯೋಜನೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಬಂಪರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್​ ನ್ಯೂಸ್​: ಹೆದ್ದಾರಿ ನಿರ್ಮಾಣ ಯೋಜನೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಬಂಪರ್​

ಕೇಂದ್ರ ಸರ್ಕಾರದ 2021-22ನೇ ಸಾಲಿನ ಬಜೆಟ್​ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ದೇಶದ ಆರ್ಥಿಕತೆಯನ್ನ ಸುಧಾರಿಸಬಲ್ಲ ಕೆಲ ಅಭಿವೃದ್ಧಿ ಯೋಜನೆಗಳನ್ನ ಘೋಷಣೆ ಮಾಡಿದ್ದಾರೆ.

ಕೇಂದ್ರ ಬಜೆಟ್​ನಲ್ಲಿ ಸೀತಾರಾಮನ್​​ ಹೊಸ ಹೆದ್ದಾರಿ ಯೋಜನೆಗಳನ್ನ ಘೋಷಿಸಿದ್ರು. ತಮಿಳುನಾಡಿನಲ್ಲಿ 3500 ಕಿಲೋಮೀಟರ್​ ಹೆದ್ದಾರಿ ನಿರ್ಮಾಣ. ಕೇರಳದಲ್ಲಿ 1100 ಕಿಲೋ ಮೀಟರ್ ಹೆದ್ದಾರಿ ನಿರ್ಮಾಣವನ್ನ ಘೋಷಣೆ ಮಾಡಿದ್ದು ಇದಕ್ಕೆ ಸರ್ಕಾರ 65000 ಕೋಟಿ ರೂಪಾಯಿ ಮೀಸಲಿಡಲಿದೆ.

BIG NEWS; ಕೇಂದ್ರ ಬಜೆಟ್ ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ‘ಬಂಪರ್’ ಕೊಡುಗೆ

ಇನ್ನು ಹೆದ್ದಾರಿ ಯೋಜನೆ ವಿಚಾರದಲ್ಲಿ ಪಶ್ಚಿಮ ಬಂಗಾಳಕ್ಕೆ ಬಂಪರ್​ ಲಭಿಸಿದೆ. ಬರೋಬ್ಬರಿ 95 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿ ನಿರ್ಮಾಣವಾಗಲಿದೆ. ಹಾಗೂ ಆಸ್ಸಾಂನಲ್ಲಿ 1300 ಹೆದ್ದಾರಿ ಘೋಷಣೆಯಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ ಹೆದ್ದಾರಿ ಉನ್ನತೀಕರಣದ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ. ಮಾರ್ಚ್​ 2022ರವರೆಗೆ 8500 ಕಿಲೋಮೀಟರ್​ ಹೆದ್ದಾರಿ ಹಾಗೂ 2021ರ ಅಂತ್ಯದೊಳಗೆ 11000 ಕಿಲೋಮೀಟರ್​ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...