ದೆಹಲಿಯ 20 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿ ಅಲ್ಟ್ರಾಸೌಂಡ್ ಬಳಸಿ ಪರೀಕ್ಷಿಸಿದ ವೇಳೆ ಆತನ ಹೊಟ್ಟೆಯಲ್ಲಿ ಪರಾವಲಂಬಿ ಹುಳುಗಳು ಇರುವ ಅಂಶ ಬೆಳಕಿಗೆ ಬಂದಿದೆ. 20 ವರ್ಷದ ಯುವಕ ಹೊಟ್ಟೆನೋವು, ಅತಿಸಾರ ಹಾಗೂ ವಾಂತಿ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಗೆ ದಾಖಲಾದ ಯುವಕನಿಗೆ ಆರಂಭಿಕ ಪರೀಕ್ಷೆಗಳನ್ನ ನಡೆಸಿದಾಗ ಆತನ ದೇಹದಲ್ಲಿ ಬಿಳಿ ರಕ್ತಕಣ ಹಾಗೂ ಹಿಮೋಗ್ಲೊಬಿನ್ ಎಲ್ಲವೂ ಏರಿಕೆಯಾಗಿರೋದು ಕಂಡು ಬಂದಿತ್ತು.
ಬಳಿಕ ಆತನ ಹೊಟ್ಟೆಗೆ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿದಾಗ ಈ ರೀತಿ ಹುಳು ಇರುವ ವಿಚಾರ ಗೊತ್ತಾಗಿದೆ. ಇದು ಮಾತ್ರವಲ್ಲದೇ ಆ ಯುವಕನ ಮಲದಲ್ಲಿ ರೌಂಡ್ ವರ್ಮ್ ಆಸ್ಕರಿಸ್ ಲುಂಬ್ರಿಕಾಯ್ಡ್ಗಳ ಮೊಟ್ಟೆಗಳೂ ಸಹ ಕಂಡುಬಂದಿವೆ ಅಂತಾ ವೈದ್ಯರು ಹೇಳಿದ್ದಾರೆ.