
ದೇಶದಲ್ಲಿ ಕೊರೊನಾ ಲಸಿಕೆಯ ಎರಡನೇ ಅಭಿಯಾನ ನಡೆಯುತ್ತಿದೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಿಗೆ ಉಬರ್ ಖುಷಿ ಸುದ್ದಿಯೊಂದನ್ನು ನೀಡಿದೆ. ಉಬರ್, ಲಸಿಕೆ ಹಾಕಿಸಿಕೊಳ್ಳುವವರಿಗೆ ಉಚಿತ ಸವಾರಿ ಸೌಲಭ್ಯ ನೀಡ್ತಿದೆ. ಉಬರ್, ಸ್ವಯಂಸೇವಕ ಸಂಸ್ಥೆ ರಾಬಿನ್ ಹುಡ್ ಆರ್ಮಿ ಜೊತೆ ಕೈಜೋಡಿಸಿದೆ.
ಉಬರ್ ಪ್ರಕಾರ, ದೇಶದ 53 ನಗರಗಳಲ್ಲಿ ಈ ಸೇವೆಯ ಲಾಭ ಪಡೆಯಬಹುದು. ಲಸಿಕೆ ಹಾಕಿಸಿಕೊಳ್ಳುವವರು ಉಬರ್ ನಲ್ಲಿ ಪ್ರಯಾಣ ಬೆಳೆಸಬಹುದು. ಯಾವುದೇ ಪ್ರಯಾಣ ಶುಲ್ಕವನ್ನು ನೀಡಬೇಕಾಗಿಲ್ಲ. ಉಬರ್‌ನ ಈ ಸೇವೆ ವೃದ್ಧರು ಮತ್ತು ದುರ್ಬಲ ವರ್ಗದವರಿಗೆ ನೀಡಲಾಗ್ತಿದೆ. ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳಲು, ಜೀವನವನ್ನು ಪುನರ್ನಿರ್ಮಿಸಲು ಮತ್ತು ದೇಶದ ಆರ್ಥಿಕ ಚೇತರಿಕೆಗೆ ಇದು ಸಹಾಯ ಮಾಡಲಿದೆ. ವೃದ್ಧರು, ಬಡ ವರ್ಗದವರು, ಕೋವಿಡ್ ಅಪ್ಲಿಕೇಶನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಈ ಸೇವೆಯನ್ನು ಪಡೆಯಬಹುದು.
ಎನ್ಜಿಒ ಜೊತೆ ಸೇರಿ ಉಬರ್ 10 ಕೋಟಿ ಮೌಲ್ಯದ ಉಚಿತ ಸವಾರಿಯನ್ನು ಘೋಷಿಸಿದೆ. ಇದ್ರಲ್ಲಿ ವೃದ್ಧರಿಗೆ 50 ಲಕ್ಷ ರೂಪಾಯಿಗಳ ಉಚಿತ ಸವಾರಿ ಕೂಡ ಸೇರಿದೆ. ಉಬರ್ ಹಾಗೂ ರಾಬಿನ್ ಹುಡ್ ಆರ್ಮಿ, 2020ರಲ್ಲಿ ಹಸಿದ ಜನರಿಗೆ ಆಹಾರ ನೀಡುವ ಕೆಲಸ ಮಾಡಿದೆ.