ಫ್ರಾನ್ಸ್ನಂತಹ ದೇಶದಲ್ಲಿ ಪ್ರತಿ 10 ನಿಮಿಷಕ್ಕೆ ಒಂದರಂತೆ ಬೈಕ್ ಕಳ್ಳತನಾಗುತ್ತೆ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಬೈಕ್ ಕಳ್ಳತನದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತೆ. ನಿಮ್ಮ ಬೈಕ್ ಕೂಡ ಯಾವುದೋ ಕಳ್ಳರ ಪಾಲಾಗಬಾರದು ಎಂಬ ಕಾಳಜಿ ನಿಮಗಿದ್ರೆ ನೀವು ಹೆಚ್ಚು ಅಲರ್ಟ್ ಆಗಿರೋದು ಅನಿವಾರ್ಯ. ಇದಕ್ಕಾಗಿ ನೀವು ಈ ಕೆಳಗಿನ ಮಾರ್ಗಗಳನ್ನ ಅನುಸರಿಬಹುದು.
ಎಲ್ಲೆಂದರಲ್ಲಿ ಬೈಕ್ ಪಾರ್ಕ್ ಮಾಡದಿರಿ :
ಸಾರ್ವಜನಿಕ ಸ್ಥಳದಲ್ಲಿ ಬೈಕ್ ನಿಲ್ಲಿಸಬೇಕಾದ ಅನಿವಾರ್ಯತೆ ಬಂದಾಗ ಜನನಿಬಿಡ ಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳಿ. ಜನರೇ ಓಡಾಡದಂತಹ ಕಡೆ ಒಂಟಿಯಾಗಿ ಬೈಕ್ನ್ನು ನಿಲ್ಲಿಸದಿರಿ. ಒಂದು ವೇಳೆ ಪಾರ್ಕಿಂಗ್ ವ್ಯವಸ್ಥೆ ಇರದ ಸಣ್ಣ ಕೆಫೆಗಳಲ್ಲಿ ನೀವು ಚಹ , ಕಾಫಿ ಕುಡಿಯುವವರಿದ್ದರೆ ನಿಮ್ಮ ಕಣ್ಣಳತೆ ದೂರದಲ್ಲಿಯೇ ಬೈಕ್ನ್ನು ನಿಲ್ಲಿಸಿ. ಆಫೀಸಿನ ಹೊರಗಡೆ ಬೈಕ್ ನಿಲ್ಲಿಸುವಾಗಲೂ ಇದೇ ನಿಯಮ ಅನುಸರಿಸಿ.
ಲಾಕ್ ಬಳಕೆ ಮಾಡೋದನ್ನ ರೂಢಿ ಮಾಡಿಕೊಳ್ಳಿ :
ನೀವು ಬೇಕಿದ್ದಲ್ಲಿ ಐದೇ ನಿಮಿಷಕ್ಕೆ ಬೈಕ್ ನಿಲ್ಲಿಸುತ್ತೀರಿ ಎಂದುಕೊಳ್ಳಿ. ಈ ಕಡಿಮೆ ಸಮಯದಲ್ಲೂ ಬೈಕ್ಗೆ ಸೆಕ್ಯೂರಿಟಿ ಲಾಕ್ ಹಾಕೋದನ್ನ ನೀವು ಮರೆಯುವಂತಿಲ್ಲ. ಒಂದರ ಬದಲು ಎರಡು ಸೆಕ್ಯೂರಿಟಿ ಲಾಕ್ಗಳನ್ನ ಹಾಕೋದು ಇನ್ನೂ ಒಳ್ಳೆಯದು. ಒಂದು ಕಳ್ಳರು ಕದಿಯೋಕೆ ಬಂದರೂ ಎರಡೆರಡು ಸೆಕ್ಯೂರಿಟಿ ಲಾಕ್ಗಳನ್ನ ಮುರಿಯೋದ್ರೊಳಗೆ ನೀವು ಅಲರ್ಟ್ ಆಗಬಹುದು.
ಜಿಪಿಎಸ್ ಅಳವಡಿಸಿ :
ನಿಮ್ಮ ಬೈಕ್ನಲ್ಲಿ ಜಿಪಿಎಸ್ ತಂತ್ರಜ್ಞಾನವಿದ್ದರೆ ನೀವು ಸುಲಭವಾಗಿ ಗಾಡಿಯನ್ನ ಟ್ರ್ಯಾಕ್ ಮಾಡಬಹುದು. ನಿಮ್ಮ ಬೈಕ್ನ ಮಷಿನ್ಗಳ ಬಳಿಯಲ್ಲಿ ಕಾಣದೇ ಇರುವ ಸ್ಥಳದಲ್ಲಿ ಜಿಪಿಎಸ್ ಅಳವಡಿಸಿದ್ದಲ್ಲಿ ಮೊಬೈಲ್ ಮೂಲಕ ಇದನ್ನ ಟ್ರೇಸ್ ಮಾಡಬಹುದು.