
ವರದಿಗಳ ಪ್ರಕಾರ 182 ಬೆಟಾಲಿಯನ್ ಸಿಆರ್ಪಿಎಫ್, ರಾಷ್ಟ್ರೀಯ ರೈಫಲ್ಸ್ ಹಾಗೂ ಜಮ್ಮು ಕಾಶ್ಮೀರ ವಿಶೇಷ ಪೊಲೀಸರ ತಂಡ ಈ ಜಂಟಿ ಕಾರ್ಯಾಚರಣೆ ನಡೆಸಿವೆ.
ಟಿಕೆನ್ ಪ್ರದೇಶದಲ್ಲಿ ಅಡಗಿದ್ದ ಉಗ್ರರು ಮೊದಲು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ಕೂಡಲೇ ಅಲರ್ಟ್ ಆದ ಭದ್ರತಾ ಪಡೆ ಸಿಬ್ಬಂದಿ ಭಯೋತ್ಪಾದಕರ ಮೇಲೆ ಗುಂಡು ಹಾರಿಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ. ಪುಲ್ವಾಮಾದಲ್ಲಿ ಎನ್ಕೌಂಟರ್ ಕಾರ್ಯಾಚರಣೆ ಮುಂದುವರಿದಿದೆ.