ಹಾವುಗಳ ಮಿಲನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಹಾವುಗಳು ಪರಸ್ಪರ ಸುತ್ತಿಕೊಂಡು ಆಟವಾಡುವ, ಮಿಲನದಲ್ಲಿ ತೊಡಗಿರುವ ವಿಡಿಯೋ ಇದಾಗಿದೆ.
“ನಾಗರಹಾವುಗಳ ಮಿಲನ” ಎಂಬ ಕ್ಯಾಪ್ಶನ್ ನೊಂದಿಗೆ ದೀಪಾಲ್ ತ್ರಿವೇದಿ ಎಂಬುವವರು ಟ್ವಿಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ತಮ್ಮ ಸ್ನೇಹಿತೆ ದೇವಿನಾ ಪಾಂಡೆ ಎಂಬುವವರು ವಿಡಿಯೋ ಕಳಿಸಿದ್ದಾಗಿ ಅವರು ತಿಳಿಸಿದ್ದಾರೆ.
ಅರಣ್ಯಾಧಿಕಾರಿ ಪರ್ವೀನ್ ಕಾಸ್ವಾನ್ ಅವರಿಗೆ ವಿಡಿಯೋ ಟ್ಯಾಗ್ ಮಾಡಿದ್ದು, ಅವರು ಟ್ವೀಟ್ ಮೂಲಕ ಮಹತ್ವದ ಮಾಹಿತಿ ನೀಡಿದ್ದಾರೆ. “ಅವು ಸರ್ಪ ಅಥವಾ ನಾಗರ ಹಾವುಗಳಲ್ಲ, ಕೇರೆ ಹಾವುಗಳು. ಅವು ಮಾನವನಿಗೆ ಅಪಾಯಕಾರಿಯಲ್ಲ. ಇಲಿಗಳನ್ನು ಹಿಡಿಯುತ್ತವೆಯಷ್ಟೆ. ಇದರಿಂದಾಗಿಯೇ ರೈತ ಸ್ನೇಹಿಯಾಗಿವೆ” ಎಂದು ವಿವರಣೆ ನೀಡಿದ್ದಾರೆ.
ಹಾವುಗಳ ಮಿಲನ ಸಮಯದಲ್ಲಿ ತೊಂದರೆ ನೀಡಬಾರದು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಬೇಸಿಗೆ ಸಮಯದಲ್ಲಿ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ ಇದಾಗಿದೆ. ಹಾವುಗಳು ಖುಷಿಯ ಉತ್ಕಟತೆಯಲ್ಲಿವೆ ಎಂದು ಪ್ರತಿಕ್ರಿಯಿಸಿದ್ದಾರೆ.