alex Certify ಶಾಕಿಂಗ್ ನ್ಯೂಸ್: ವಾಶ್ ರೂಮ್ ಗೆ ಹಿಂಬಾಲಿಸಿ ಬಂದು ತಂದೆಯಿಂದಲೇ ನಿರಂತರ ಲೈಂಗಿಕ ದೌರ್ಜನ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ನ್ಯೂಸ್: ವಾಶ್ ರೂಮ್ ಗೆ ಹಿಂಬಾಲಿಸಿ ಬಂದು ತಂದೆಯಿಂದಲೇ ನಿರಂತರ ಲೈಂಗಿಕ ದೌರ್ಜನ್ಯ

ರಾಯಪುರ: ಛತ್ತೀಸ್ಗಡದ ಬಿಲಾಸ್ಪುರದಲ್ಲಿ ಕಾಮುಕನೊಬ್ಬ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮನೆ ಕೂಡ ಮಹಿಳೆಯರಿಗೆ ಸುರಕ್ಷಿತವಲ್ಲ ಎನ್ನುವುದನ್ನು ಈ ಪ್ರಕರಣ ಬಿಂಬಿಸಿದೆ.

21 ಮತ್ತು 13 ವರ್ಷದ ಇಬ್ಬರು ಹೆಣ್ಣುಮಕ್ಕಳ ಮೇಲೆ ತಂದೆಯೇ 7 ವರ್ಷಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದಾನೆ. ತಂದೆಯ ಕೃತ್ಯದಿಂದ ನಲುಗಿ ಹೋಗಿದ್ದ ಹೆಣ್ಣುಮಕ್ಕಳು ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಕೊನೆಗೆ ಮಹಿಳಾ ಸಹಾಯವಾಣಿ ಅಧಿಕಾರಿಗಳು, ಪೊಲೀಸರ ಎದುರು ಸಂಕಷ್ಟ ಹೇಳಿಕೊಂಡಿದ್ದಾರೆ.

ಹುಡುಗಿಯರ ತಾಯಿ 7 ವರ್ಷಗಳ ಹಿಂದೆಯೇ ಮನೆಯಿಂದ ಹೊರಟು ಹೋಗಿದ್ದು ಮಕ್ಕಳು ತಂದೆಯ ಆರೈಕೆಯಲ್ಲಿದ್ದರು. ಕೊರೋನಾ ಕಾರಣದಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಬಾಲಕಿಯರ ಸಹೋದರರು ಮಹಿಳಾ ಸಹಾಯವಾಣಿ ಸಂಪರ್ಕಿಸಿ ನೆರವು ಯಾಚಿಸಿದ್ದಾರೆ. ಸಹಾಯವಾಣಿ ತಂಡದ ಅಧಿಕಾರಿಗಳು, ಬಾಲಕಿಯರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ತಂದೆಯ ಕೃತ್ಯದ ಬಗ್ಗೆ ಹೆಣ್ಣು ಮಕ್ಕಳು ಬಾಯಿ ಬಿಟ್ಟಿದ್ದಾರೆ.

ವಾಶ್ ರೂಮ್ ಗೆ ಹಿಂಬಾಲಿಸುತ್ತಿದ್ದ ತಂದೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆ ಸಂಬಂಧಿತ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...