ನದಿಯಲ್ಲಿ ಏಕಾಏಕಿ ನೀರು ಹೆಚ್ಚಳವಾದ್ದರಿಂದ ನದಿ ಮಧ್ಯದ ಬಂಡೆಯಲ್ಲಿ ಸಿಕ್ಕಿಬಿದ್ದವರನ್ನು ಪೊಲೀಸರು ಹರಸಾಹಸ ಮಾಡಿ ಬಚಾವ್ ಮಾಡಿದ ಘಟನೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ.
ಆರು ಹುಡುಗಿಯರ ಗುಂಪು ಪೆಂಚ್ ನದಿಯ ದಡದಲ್ಲಿ ಪಿಕ್ ನಿಕ್ ಗಾಗಿ ತೆರಳಿದ್ದರು. ಈ ಪೈಕಿ ಇಬ್ಬರು ನದಿಯ ಮಧ್ಯದಲ್ಲಿರುವ ಬಂಡೆಯ ಮೇಲೆ ಸೆಲ್ಫಿ ಕ್ಲಿಕ್ ಮಾಡಲು ನಿರ್ಧರಿಸಿದರು.
ಮೇಘ ಹಾಗೂ ವಂದನಾ ತ್ರಿಪಾಠಿ ಈ ಸಾಹಸಕ್ಕಿಳಿದವರು. ನದಿಯ ನಡುವೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗಲೇ ನದಿಯ ನೀರು ಏಕಾಏಕಿ ಹೆಚ್ಚಿದೆ. ನದಿಯ ರಭಸ ಹೆಚ್ಚಿದಂತೆ ಅವರಿಬ್ಬರು 2 ದಡವನ್ನು ತಲುಪಲಾಗದ ಸ್ಥಿತಿಯಲ್ಲಿ ಸಿಲುಕಿದರು.
ಬಳಿಕ ಗುಂಪಿನಲ್ಲಿದ್ದ ಇತರ ಹುಡುಗಿಯರು ಭಯಭೀತರಾಗಿ ಪೊಲೀಸರನ್ನು ಸಹಾಯಕ್ಕಾಗಿ ಕರೆದರು. 12 ಪೊಲೀಸರ ತಂಡ ಸ್ಥಳಕ್ಕೆ ತಲುಪಿ ಸ್ಥಳೀಯ ಆಡಳಿತ ಮತ್ತು ಗ್ರಾಮಸ್ಥರ ಸಹಾಯದಿಂದ ಬಾಲಕಿಯರನ್ನು ರಕ್ಷಿಸಿದೆ. ಸುತ್ತಮುತ್ತಲಿನ ನೀರು ಏರುತ್ತಿದ್ದರಿಂದ ಹುಡುಗಿಯರು ಸುಮಾರು ಒಂದು ಗಂಟೆ ಬಂಡೆಯ ಮೇಲೆ ನಿಂತಿದ್ದರು.