ಉತ್ತರ ಪ್ರದೇಶದ ಫತೇಪುರ್ ನಲ್ಲಿ ಸಲಿಂಗಕಾಮಿಗಳ ಮದುವೆ ನಡೆದಿದೆ. ಸ್ನೇಹಿತೆಯರಿಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮದುವೆ ನಂತ್ರ ಪೊಲೀಸ್ ಠಾಣೆಗೆ ಬಂದ ಜೋಡಿ ರಕ್ಷಣೆ ಕೇಳಿದ್ದಾರೆ.
ಕೋತ್ವಾಲಿಯ ಹುಡುಗಿ ಎರಡು ವರ್ಷಗಳ ಹಿಂದೆ ಕೋಚಿಂಗ್ ಕೆಲಸಕ್ಕೆಂದು ಕಾನ್ಪುರಕ್ಕೆ ತೆರಳಿದ್ದಳು. ಅಲ್ಲಿ ಮಾಲ್ ನಲ್ಲಿ ಪಾರ್ಟ್ ಟೈಂ ಕೆಲಸ ಮಾಡ್ತಿದ್ದಳು. ಅಲ್ಲಿಯೇ ಕೆಲಸ ಮಾಡ್ತಿದ್ದ ಕಾನ್ಪುರದ ಹುಡುಗಿ ಜೊತೆ ಸ್ನೇಹ ಬೆಳೆದಿದೆ. ಸ್ನೇಹ ಪ್ರೇಮಕ್ಕೆ ತಿರುಗಿದೆ.
ಒಂದು ತಿಂಗಳ ಹಿಂದೆ ಮನೆಯವರಿಗೆ ಹೇಳದೆ ಸುತ್ತಾಡಲು ಹೋಗಿದ್ದರು ಎನ್ನಲಾಗಿದೆ. ಮತ್ತೆ 10 ದಿನಗಳ ಹಿಂದೆ ಇಬ್ಬರೂ ನಾಪತ್ತೆಯಾಗಿದ್ದರು. ವಿಷ್ಯ ಗೊತ್ತಾದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಮೊದಲು ಕಾನ್ಪುರಕ್ಕೆ ಬಂದ ಜೋಡಿ ನಂತ್ರ ಕೋತ್ವಾಲಿಗೆ ಬಂದು ಪೊಲೀಸ್ ಮುಂದೆ ಮದುವೆಯಾದ ವಿಷ್ಯ ಹೇಳಿದೆ. ಮನೆಯವರ ಜೊತೆ ಇರಲು ನಿರಾಕರಿಸಿದ ಜೋಡಿ ಪ್ರತ್ಯೇಕವಾಗಿರಲು ಮುಂದಾಗಿದೆ. ಈ ಮಧ್ಯೆ ಕೋತ್ವಾಲಿ ಹುಡುಗಿ ತಾಯಿ ಇಬ್ಬರನ್ನೂ ಒಟ್ಟಿಗೆ ಇಟ್ಟುಕೊಳ್ಳುತ್ತೇವೆ. ಈ ಮದುವೆ ನನಗೆ ಒಪ್ಪಿಗೆ ಇದೆ ಎಂದಿದ್ದಾಳೆ. ಆದ್ರೆ ಆಕೆ ಮಾತನ್ನು ಸಲಿಂಗಕಾಮಿಗಳು ಕೇಳಿಲ್ಲ.