ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಶಾಲೆಯ ತರಗತಿಯೊಂದರಲ್ಲಿ ಎರಡು ನಾಗರ ಹಾವುಗಳು ಕಾಣಿಸಿಕೊಂಡಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಯ ಮೈದಾನದಲ್ಲಿ ಆಡಲು ಬಂದ ಮಕ್ಕಳ ಕಣ್ಣಿಗೆ ಈ ನಾಗರ ಹಾವುಗಳು ಕಾಣಿಸಿಕೊಂಡಿವೆ. ಕೂಡಲೇ ಅವರು ಶಿಕ್ಷಕರಿಗೆ ಅಲರ್ಟ್ ಮಾಡಿದ್ದಾರೆ. ಕೋವಿಡ್-19 ಕಾರಣದಿಂದ ಮಾರ್ಚ್ 16ರಿಂದ ಶಾಲೆಯನ್ನು ಮುಚ್ಚಲಾಗಿರುವ ಕಾರಣ ಈ ಹಾವುಗಳು ಒಳಗೆ ಸೇರಿಕೊಂಡು 30 ಮೊಟ್ಟೆಗಳನ್ನು ಇಟ್ಟಿವೆ.
ಅರಣ್ಯ ಇಲಾಖೆ ಹಾಗೂ ಉರಗ ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ, ಹಾವುಗಳು ಹಾಗೂ ಮೊಟ್ಟೆಗಳನ್ನು ರಕ್ಷಿಸಿ ಅವುಗಳನ್ನು ಹತ್ತಿರದಲ್ಲಿದಲ್ಲಿನ ಪಶು ಕೇಂದ್ರಕ್ಕೆ ಕೊಂಡೊಯ್ದಿದ್ದಾರೆ.