alex Certify ಪ್ರೀತಿಯಲ್ಲಿ ಬಿದ್ದ 9ನೇ ತರಗತಿ ಜೋಡಿ ಮಾಡಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಯಲ್ಲಿ ಬಿದ್ದ 9ನೇ ತರಗತಿ ಜೋಡಿ ಮಾಡಿದ್ದೇನು…?

ಗುಜರಾತಿನ ಛಾನಿಯಲ್ಲಿ 9ನೇ ತರಗತಿ ಓದುತ್ತಿರುವ ಹುಡುಗ-ಹುಡುಗಿ ಮಧ್ಯೆ ಪ್ರೀತಿ ಚಿಗುರಿದೆ. ಕೊರೊನಾ ಹಿನ್ನಲೆಯಲ್ಲಿ ಶಾಲೆ ಬಂದ್ ಆಗಿದ್ದ ಕಾರಣ ಇಬ್ಬರೂ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದ್ರಿಂದ ಬೇಸರಗೊಂಡಿದ್ದ ಜೋಡಿ ಮನೆ ಬಿಡಲು ನಿರ್ಧರಿಸಿದ್ದಾರೆ.

ಮನೆಯಿಂದ ಓಡಿ ಹೋಗುವ ಪ್ಲಾನ್ ಮಾಡಿದ್ದಾರೆ. ಡಿಸೆಂಬರ್ 28 ರಂದು ಮನೆಯಿಂದ ಓಡಿಹೋಗಲು ಹುಡುಗ ದೇವಸ್ಥಾನದ 25 ಸಾವಿರ ರೂಪಾಯಿ ಕದ್ದಿದ್ದಾನೆ. ಹುಡುಗಿ ಮನೆಯಲ್ಲಿದ್ದ 5,000 ರೂಪಾಯಿ ಕದ್ದಿದ್ದಾಳೆ. ಮನೆಯಿಂದ ತಪ್ಪಿಸಿಕೊಂಡ ನಂತರ ಇಬ್ಬರು ರಣೋಲಿ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾರೆ. ಅಲ್ಲಿ ರೈಲು ಸಿಗದ ಕಾರಣ ಇಬ್ಬರೂ ಬಾಡಿಗೆ ಕಾರ್ ನಲ್ಲಿ ಸಯಾಜಿಗುಂಜ್ ಗೆ ಹೋಗಿದ್ದಾರೆ.

ಅಲ್ಲಿ ಬಾಡಿಗೆ ಮನೆ ಪಡೆದು ವಾಸ ಶುರು ಮಾಡಿದ್ದಾರೆ. ಕದ್ದ ಹಣ ಖಾಲಿಯಾದ್ಮೇಲೆ ಹುಡುಗ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದಾನೆ. ಆತನಿಗೆ ದಿನಕ್ಕೆ 366 ರೂಪಾಯಿ ಸಿಗ್ತಿತ್ತಂತೆ. ಈ ಮಧ್ಯೆ ಹುಡುಗ-ಹುಡುಗಿ ಮನೆಯವರು ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಹುಡುಗ ತನ್ನ ಸ್ನೇಹಿತರಿಗೆ ಕರೆ ಮಾಡಿದ್ದ ಎನ್ನಲಾಗಿದೆ. ಇದನ್ನು ತಿಳಿದ ಪೊಲೀಸರು ವಿಚಾರಣೆ ಮಾಡಿ ಇಬ್ಬರನ್ನು ಪತ್ತೆ ಮಾಡಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ. ಬಿಟ್ಟಿರಲು ಸಾಧ್ಯವಾಗಲಿಲ್ಲ. ಹಾಗಾಗಿ ಓಡಿ ಹೋಗಿದ್ದೆವು ಎಂದು ಹುಡುಗ ಹೇಳಿದ್ದಾನೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...