
ಅಂಬಾಲಾ ವಾಯುನೆಲೆಗೆ ರಫೇಲ್ ಜೆಟ್‌ಗಳು ಬಂದಿಳಿಯುವ ಗಂಟೆಗಳ ಮುನ್ನವೇ ದೇಶವಾಸಿಗಳ ಮನದಲ್ಲಿ ಭಾರೀ ಕಾತರ ಮನೆ ಮಾಡಿತ್ತು. ಭಾರತಕ್ಕೆ ಆಗಮಿಸುವ ಆಗಸದ ಹಾದಿಯಲ್ಲಿಯೇ ರಫೇಲ್‌ಗಳ ಫೋಟೋ/ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಶೇರ್ ಮಾಡಿಕೊಂಡು ಖುಷಿ ಪಡುತ್ತಿದ್ದರು.
ಇದೇ ವೇಳೆ, ರಫೇಲ್ ಡೀಲ್ ಅನ್ನು ಫ್ರಾನ್ಸ್ ನ ಡಸ್ಸೌನೊಂದಿಗೆ ಬಹಳ ಸಮರ್ಪಕವಾಗಿ ಮಾಡಿಕೊಳ್ಳಲು ಬಹುವಾಗಿ ಶ್ರಮಿಸಿದ ರಕ್ಷಣಾ ಇಲಾಖೆಯ ಮಾಜಿ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಬಹುವಾಗಿ ನೆನೆದಿದ್ದಾರೆ ನೆಟ್ಟಿಗರು.
ಕ್ಯಾನ್ಸರ್ ಜೊತೆಗೆ ಹೋರಾಟ ಮಾಡುತ್ತಾ ಅಕಾಲಿಕ ಮರಣಕ್ಕೆ ಈಡಾದ ಪರಿಕ್ಕರ್ ಚಿತ್ರವನ್ನು ಆಗಸದಿಂದ ಅವರು ರಫೇಲ್‌ಗಳು ಹಾರಿಕೊಂಡು ಭಾರತಕ್ಕೆ ಬರುತ್ತಿರುವುದನ್ನು ನೋಡುತ್ತಿರುವಂತೆ ಮಾರ್ಫ್ ಮಾಡಿ ಹಾಕಲಾಗಿದ್ದು, ಈ ಚಿತ್ರಕ್ಕೆ ಭಾವಪೂರ್ಣ ಪ್ರತಿಕ್ರಿಯೆ ಸಿಕ್ಕಿದೆ.