ಜಮ್ಮು ಮತ್ತು ಕಾಶ್ಮೀರ ಚೀನಾಗೆ ಸೇರಿದ ಪ್ರದೇಶ ಎಂದು ತೋರಿಸುವ ಮೂಲಕ ಟ್ವಿಟರ್ ಇಂಡಿಯಾ ಹೊಸ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿದೆ.
ಒಆರ್ಎಫ್ ಸಂಸ್ಥಾಪಕ ಕಂಚನ್ ಗುಪ್ತಾ ಟ್ವಿಟರ್ನ ಈ ಪ್ರಮಾದವನ್ನ ಬಯಲಿಗೆಳೆಯುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಜಮ್ಮು & ಕಾಶ್ಮೀರವನ್ನ ಚೀನಾಗೆ ಕೊಡಲು ಟ್ವಿಟರ್ ನಿರ್ಧರಿಸಿದಂತೆ ಕಾಣ್ತಿದೆ. ಇದು ಭಾರತೀಯ ಕಾನೂನಿನ ಉಲ್ಲಂಘನೆಯಾಗಿದೆ. ಭಾರತೀಯ ನಾಗರಿಕರು ಇದಕ್ಕೆ ತಕ್ಕ ಶಿಕ್ಷೆ ಕೊಡುತ್ತಾರೆ ಎಂದು ಟ್ವೀಟ್ ಮಾಡಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ರನ್ನ ಟ್ಯಾಗ್ ಮಾಡಿದ್ದಾರೆ.
ಕಂಚನ್ ಗುಪ್ತಾ ಟ್ವೀಟ್ ನೋಡ್ತಿದ್ದಂತೆಯೇ ಟ್ವಿಟರ್ ವಿರುದ್ಧ ಕೆಂಡಾಮಂಡಲರಾದ ಭಾರತೀಯರು ಸರ್ಕಾರ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.