ಜಮ್ಮು ಮತ್ತು ಕಾಶ್ಮೀರದ ಲೆಫ್ಟೆನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಟ್ವಿಟರ್ ಖಾತೆಯನ್ನು ಸೋಮವಾರದಂದು ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟ್ಟರ್ ಅಮಾನತುಗೊಳಿಸಿತ್ತು. ಇದಕ್ಕೆ ಕಾರಣವೇನೆಂದು ಮೊದಲಿಗೆ ತಿಳಿದು ಬಂದಿರಲಿಲ್ಲ.
ಸ್ವಲ್ಪ ಹೊತ್ತಿನ ಬಳಿಕ ಸ್ಪಷ್ಟನೆ ಕೊಟ್ಟ ಟ್ವಿಟರ್, ಅದೊಂದು ’ತಾಂತ್ರಿಕ ದೋಷವಾಗಿತ್ತು’ ಎಂದಿದೆ. ಇದಕ್ಕೂ ಮುನ್ನ ಸಿನ್ಹಾರ ಹ್ಯಾಂಡಲ್‌ನಲ್ಲಿ ಇದ್ದ ಸಂದೇಶವು, “ಟ್ವಿಟರ್ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣ ಖಾತೆಗಳನ್ನು ಟ್ವಿಟರ್ ಅಮಾನತುಗೊಳಿಸುತ್ತದೆ” ಎಂದು ಸಂದೇಶ ಹಾಕಲಾಗಿತ್ತು.
ಸಾಮಾಜಿಕ ಅಂತರ ಪಾಲಿಸದ ಜನತೆ ಪ್ರಶ್ನೆ ಮಾಡಿದ ಪೊಲೀಸರ ಮೇಲೆ ಹಲ್ಲೆ
ಇದಾದ ಕೆಲವೇ ಸಮಯದ ಬಳಿಕ ಲೆ.ಗವರ್ನರ್ ಟ್ವಿಟರ್ ಖಾತೆಯನ್ನು ಮರುಚಾಲನೆಗೊಳಿಸಲಾಯಿತು.
ಈ ವಿಚಾರವನ್ನು ಸಂಬಂಧಪಟ್ಟ ಮಂದಿಯ ಗಮನಕ್ಕೆ ತರಲಾಗಿದೆ ಎಂದು ಸೋಮವಾರದ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ರಾಜಭವನದ ಮೂಲಗಳು ತಿಳಿಸಿವೆ.