ಇತ್ತೀಚೆಗಷ್ಟೆ ಬಿಸಿಸಿಐ ಸಂಸ್ಥೆಯ ಅಧಿಕೃತ ಟ್ವಿಟರ್ ಖಾತೆಯ ಪ್ರೊಫೈಲ್ ಫೋಟೋವನ್ನು ಕಾಪಿರೈಟ್ ಸಮಸ್ಯೆಯಿಂದ ಟ್ವಿಟ್ಟರ್ ಡಿಲೀಟ್ ಮಾಡಿತ್ತು. ಇದೀಗ ಅಮಿತ್ ಶಾ ಅವರ ಪ್ರೊಫೈಲ್ ಫೋಟೋಗೂ ಕಾಪಿರೈಟ್ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದ ಫೋಟೋವನ್ನು ಟ್ವಿಟ್ಟರ್ ಡಿಲೀಟ್ ಮಾಡಿದೆ.
ಇನ್ನು ಡಿಲೀಟ್ ಆದ ನಂತರದಲ್ಲಿ ಅವರ ಮತ್ತೊಂದು ಫೋಟೋವನ್ನು ಪ್ರೊಫೈಲ್‌ಗೆ ಹಾಕಿದ್ದಾರೆ. ಅಮಿತ್ ಶಾ ಅವರ ಫೋಟೋ ಮೇಲೆ ಕ್ಲಿಕ್ ಮಾಡಿದರೆ ಮಾಧ್ಯಮವನ್ನು ತೋರಿಸಲಾಗುವುದಿಲ್ಲ ಎಂದು ತೋರಿಸುತ್ತಿತ್ತು. ಹೀಗಾಗಿ ಅಮಿತ್ ಶಾ ಅವರ ಪ್ರೊಫೈಲ್ ಫೋಟೋ ಡಿಲೀಟ್ ಮಾಡಿ ಬೇರೊಂದು ಫೋಟೋ ಹಾಕಲಾಗಿದೆ.
ಅಮಿತ್ ಶಾ ಅವರ ಪ್ರೊಫೈಲ್ ಫೋಟೋ ಡಿಲೀಟ್ ಆದ ನಂತರದಲ್ಲಿ ಟ್ವಿಟರ್ ಸಂಸ್ಥೆಯ ವಕ್ತಾರ ಪ್ರತಿಕ್ರಿಯೆ ನೀಡಿದ್ದಾರೆ. ಅಜಾಗರೂಕತೆ ಮತ್ತು ನಮ್ಮ ಜಾಗತಿಕ ಹಕ್ಕು ಸ್ವಾಮ್ಯಗಳ ನೀತಿಗಳಡಿಯಲ್ಲಿ ಈ ರೀತಿ ಮಾಡಿದ್ದೇವೆ ಎಂದು ಹೇಳಿದ್ದಾರೆ.